ಕೋವಿಡ್ ಸಂಕಷ್ಟಕ್ಕೆ ಮಿಡಿದ ಕೊಹ್ಲಿ-ಅನುಷ್ಕಾ

ಬೆಂಗಳೂರು, ಮೇ 08, 2021 (www.justkannada.in):

ಕೋವಿಡ್ ಸಂಕಷ್ಟದಲ್ಲಿರುವ ಜನರಿಗಾಗಿ ನಟಿ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಯ್ಲಿ  2 ಕೋಟಿ ರೂ.ಗಳನ್ನು ದೇಣಿಗೆಯಾಗಿ ನೀಡಿದ್ದಾರೆ.

ಈ ಸಂಬಂಧ ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋವೊಂದನ್ನು ಹಂಚಿಕೊಂಡಿರುವ  ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಯ್ಲಿ ಎಲ್ಲರೂ ಕೈ ಜೋಡಿಸುವಂತೆ ಕೋರಿದ್ದಾರೆ.

ಕೋವಿಡ್ ವಿರುದ್ಧ ಹಗಲು-ರಾತ್ರಿ ಹೋರಾಡುತ್ತಿರುವ ವಾರಿಯರ್ಸ್ ಗಳಿಗೆ ಎಲ್ಲರಿಗೂ ನಾವು ಆಭಾರಿ ಆಗಿದ್ದೇವೆ. ಅವರ ಬದ್ಧತೆಯನ್ನು ಮೆಚ್ಚಲೇಬೇಕು ಎಂದು ಈ ಸ್ಟಾರ್ ದಂಪತಿ ಶ್ಲಾಘಿಸಿದ್ದಾರೆ.

ಸಂದರ್ಭದಲ್ಲಿ ದೇಶಕ್ಕೆ ಎಲ್ಲಕ್ಕಿಂತ ಹೆಚ್ಚು ಬೆಂಬಲ ಬೇಕಾಗಿದೆ. ಅವಶ್ಯಕತೆ ಇರುವವರಿಗೆ ಸೂಕ್ತ ಸಹಾಯ ಒದಗಿಸಲು ಈ ನಿಧಿ ಸಂಗ್ರಹ ಅಭಿಯಾನ ಯಶಸ್ವಿ ಆಗುತ್ತದೆ  ಎಂದು ಹೇಳಿದ್ದಾರೆ.