ಭೂಗತ ಪಾತಕಿ ದಾವೊದ್ ಇಬ್ರಾಹಿಂಗೆ ಕೊರೋನಾ ವೈರಸ್ ದೃಢ…

Promotion

ನವದೆಹಲಿ,ಜೂ,5,2020(www.justkannada.in): ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಕೊರೊನಾ ವೈರಸ್ ಇರುವುದು ಕೋವಿಡ್ ಟೆಸ್ಟ್ ವೇಳೆ ದೃಢಪಟ್ಟಿದೆ ಎಂಬ ಮಾಹಿತಿ ಲಭ್ಯವಾಗಿದೆ.coronavirus-underworld-don-dawood-ibrahim

ದಾವೋದ್ ಇಬ್ರಾಹಿಂ ಭಾರತಕ್ಕೆ ಮೋಸ್ಟ್ ವಾಂಟೆಡ್ ಭೂಗತ ಪಾತಕಿಯಾಗಿದ್ದು, ಈತನಿಗೆ ಕೊರೋನಾ ಸೋಂಕು ತಗುಲಿದೆ. ಈತ ಪಾಕಿಸ್ತಾನ ಕರಾಚಿಯಲ್ಲಿದ್ದು ಕೋವಿಡ್ ಖಚಿತವಾಗುತ್ತಿದ್ದಂತೆ ಆತನ ಸಹಚರರು ಮತ್ತು ಇತರೆ ಸಿಬ್ಬಂದಿಗೆ ಕ್ವಾರಂಟೈನ್ ಮಾಡಲಾಗಿದೆ ಎಂಬ ಮಾಹಿತಿ ಲಭಿಸಿದೆ.

ಇನ್ನು ದಾವೂದ್ ಇಬ್ರಾಹಿಂ ಮಾತ್ರವಲ್ಲ ಆತನ ಪತ್ನಿಗೂ  ಸಹ ಕೊವಿಡ್ ಸೋಂಕು ತಗುಲಿದೆ. ಸೋಂಕಿತ ದಾವೊದ್ ಮತ್ತು ಮತ್ತು ಪತ್ನಿಯನ್ನು ಕರಾಚಿಯ ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಲಾಗುತ್ತಿದೆ.

Key words: Coronavirus -underworld don -Dawood Ibrahim