‘ಕೈ’ ಶಾಸಕರ ರಾಜೀನಾಮೆ ಕೊಡಿಸುವೆ’ ಎಂದಿದ್ದ ಸಚಿವ ರಮೇಶ್ ಜಾರಕಿಹೊಳಿಗೆ ಪರೋಕ್ಷ ಟಾಂಗ್ ಕೊಟ್ಟ ಡಿ.ಕೆ ಶಿವಕುಮಾರ್….

ಬೆಂಗಳೂರು,ಜೂ,5,2020(www.justkannada.in): ಹೈಕಮಾಂಡ್ ಸೂಚಿಸಿದರೇ ಕಾಂಗ್ರೆಸ್  ಶಾಸಕರ ರಾಜೀನಾಮೆ ಕೊಡಿಸುವೆ ಎಂದು ಹೇಳಿಕೆ ನೀಡಿದ್ದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

ಯಾರೋ ಮೆಂಟಲ್ ಇದ್ದಾರೆ. ಏನೇನೋ ಮಾತನಾಡ್ತಾರೆ. 20 ಜನ,30 ಜನ,40 ಜನ ಎಂದು ಏನೇನೋ ಹೇಳ್ತಾರೆ. ಅದೇನು ಕಡ್ಲೇಪುರಿ ವ್ಯಾಪಾರ ಅಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಲೇವಡಿ ಮಾಡಿದರು.Bangalore- KPCC- president-DK Shivakumar- minister- ramesh jarkiholi

ಬೆಂಗಳೂರಿನಲ್ಲಿ ಇಂದು ಮಾತನಾಡಿದ ಡಿ.ಕೆ ಶಿವಕುಮಾರ್, ಸಚಿವರು ಏನು ಮಾತನಾಡಿದ್ದಾರೆ ಎಲ್ಲವನ್ನೂ ಗಮನಿಸಿದ್ದೇವೆ. ಈ ರೀತಿಯಾಗಿ ಶಾಸಕರಿಗೆ ಅಗೌರವ ಬೇಡ. ಯಾರು ಎಲ್ಲಿ ಯಾವ ಹೋಟೆಲ್ ನಲ್ಲಿ ಸಭೆ ನಡೆಸಿದ್ದಾರೆ. ನಿನ್ನೆ  ರಾತ್ರಿ ಯಾವ ಹೋಟೆಲ್ ನಲ್ಲಿ ಸೇರಿದ್ದರು ಯಾರಿಗಾಗಿ ಕಾಯುತ್ತಿದ್ರು ಎಂಬ ಎಲ್ಲಾ ವಿಚಾರ ಗೊತ್ತು ಎಂದು ಚಾಟಿ ಬೀಸಿದರು.

ಜೂನ, 8 ರಂದು ರಾಜ್ಯಸಭೆ ಚುನಾವಣೆಗೆ ಮಲ್ಲಿಕಾರ್ಜುನ ಖರ್ಗೆ ನಾಮಪತ್ರ…

ಜೂನ್ 8 ರಂದು ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತಾರೆ. ಆದರೆ ಆ ವೇಳೆ ಯಾವ ಕಾರ್ಯಕರ್ತರು ಬರುವಂತಿಲ್ಲ. ಶಾಸಕರು ಕೆಲ ಮುಖಂಡರು ಮಾತ್ರ ಹೋಗುತ್ತೇವೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.

ಹೆಚ್.ಡಿ ದೇವೇಗೌಡರ ಸ್ಪರ್ಧೆ ಬಗ್ಗೆ ಪ್ರತಿಕ್ರಿಯಿಸಿದ ಡಿ.ಕೆ ಶಿವಕುಮಾರ್, ಈ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗಿದ್ದೇವೆ ಎಂದರು.

Key words: Bangalore- KPCC- president-DK Shivakumar- minister- ramesh jarkiholi