ಪರಿಹಾರ ಘೋಷಿಸಿ ಒಂದು ತಿಂಗಳಾದ್ರೂ ಈವರೆಗೆ ಒಂದು ರೂಪಾಯಿ ಕೊಟ್ಟಿಲ್ಲ- ಮಾಜಿ ಸಿಎಂ ಸಿದ್ಧರಾಮಯ್ಯ ಆರೋಪ…

ಮೈಸೂರು,ಜೂ,5,2020(www.justkannada.in):  ಸಂಕಷ್ಟದಲ್ಲಿರುವವರಿಗೆ ಸರ್ಕಾರ ಪರಿಹಾರ ಘೋಷಿಸಿ ಒಂದು ತಿಂಗಳಾಗಿದೆ. ಆದರೆ ಈವರೆಗೆ ಒಂದು ರೂಪಾಯಿಯನ್ನೂ ಕೊಟ್ಟಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪ ಮಾಡಿದರು.

ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಜನರು ಸಂಕಷ್ಟದಲ್ಲಿರುವಾಗ ಪರಿಹಾರ ನೀಡಬೇಕು. ಎಲ್ಲಾ ಸರಿಯಾದ ಮೇಲೆ  ಪರಿಹಾರ ಕೊಟ್ಟರೇ ಏನು ಪ್ರಯೋಜನ..? ಹೀಗಾಗಿ ಕೂಡಲೇ ಘೋಷಿಸಿರುವ ಪರಿಹಾರವನ್ನ ಬಿಡುಗಡೆ ಮಾಡಲಿ ಎಂದು ಆಗ್ರಹಿಸಿದರು.no-compensation-month-govrnament-former-cm-siddaramaiah-accused

 ತಬ್ಲಿಗಿಗಳ ಮೇಲೆ ಗೂಬೆ ಕೂರಿಸಲಾಗುತ್ತಿದೆ…

ವಿಮಾನದಲ್ಲಿ ಬಂದವರಿಂದ ಕೊರೋನಾ ಸೋಂಕು ಹರಡಿದೆ. ಆದರೆ ತಬ್ಲೀಗಿಗಳ ಮೇಲೆ ಗೂಬೆ ಕೂರಿಸಲಾಗುತ್ತಿದೆ. ತಬ್ಲೀಗ್ ಗಳಿಗೆ ಧರ್ಮಸಭೆ ನಡೆಸಲು ಅನುಮತಿ ನೀಡಿದ್ಯಾಕೆ..? ಕೊರೋನಾ ವಿಚಾರ ನಿಭಾಯಿಸಲು ಸರ್ಕಾರಕ್ಕೆ ಆಗಿಲ್ಲ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಕಿಡಿಕಾರಿದರು.

ಜೆಡಿಎಸ್ ಬೆಂಬಲಿಸುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ….

ರಾಜ್ಯಸಭೆ ಚುನಾವಣಾ ವಿಚಾರ, ನಾನು ಜೆಡಿಎಸ್ ಬೆಂಬಲಿಸುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ. ಈ ಬಗ್ಗೆ ಕೆಪಿಸಿಸಿಯಲ್ಲೂ ಚರ್ಚೆಯಾಗಿಲ್ಲ. ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿದ್ದೇವೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

Key words: No compensation – month-govrnament-Former CM Siddaramaiah -accused.