ಸಚಿವ ಪ್ರಭು ಚೌವ್ಹಾಣ್ ಗೆ ಕೊರೋನಾ ಸೋಂಕು ದೃಢ….

Promotion

ಬೀದರ್,ಸೆಪ್ಟಂಬರ್,10,2020(www.justkannada.in): ಪಶುಸಂಗೋಪನೆ ಹಜ್ ಮತ್ತು ವಕ್ಫ್ ಸಚಿವ ಪ್ರಭು ಚವ್ಹಾಣ್ ಅವರಿಗೆ ಕೋವಿಡ್-19 ಕೊರೊನಾ ಸೋಂಕು ಧೃಡ ಪಟ್ಟಿದ್ದು ವೈದ್ಯರ ಸಲಹೆಯಂತೆ ಬೀದರ್ ನಲ್ಲಿ ಹೋಮ್ ಕ್ವಾರಂಟೈನ್ ನಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಆರೋಗ್ಯದಲ್ಲಿ ಯಾವುದೇ ಏರುಪೇರು ಕಂಡುಬಂದಿಲ್ಲ.jk-logo-justkannada-logo

ಎರಡು ದಿನಗಳ ಹಿಂದೆಯಷ್ಟೆ ಸಚಿವರ ವಾಹನ ಚಾಲಕನಿಗೆ ಸೋಂಕು ಧೃಢಪಟ್ಟ ಹಿನ್ನೆಲೆಯಲ್ಲಿ ಸಚಿವ ಪ್ರಭು ಚವ್ಹಾಣ್ ಸಹ ನಿನ್ನೆ ಟೆಸ್ಟ್ ಮಾಡಿಸಿದ್ದು ವರದಿಯಲ್ಲಿ ಪಾಸಿಟಿವ್ ಬಂದಿದೆ ಎಂದು ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಅವರ ಆಪ್ತ ಸಹಾಯಕ  ಹಾಗೂ ಬೀದರ್ ನಲ್ಲಿ ಸಚಿವರ ಗನ್ ಮ್ಯಾನ ಅವರಿಗೂ ಸೋಂಕು ಧೃಡ ಪಟ್ಟಿದೆ. ಇತ್ತೀಚೆಗೆ ನನ್ನ ಸಂಪರ್ಕಕ್ಕೆ ಬಂದವರು ಟೆಸ್ಟ್ ಮಾಡಿಸಿಕೊಳ್ಳಿ ಎಂದು ಸಚಿವರು ವಿನಂತಿಸಿದ್ದಾರೆ.coronavirus-infection-confirmed-minister-prabhu-chauhan

ವೈದ್ಯರ ಸಲಹೆಯಂತೆ ಸಚಿವರು ಚಿಕಿತ್ಸೆ ಪಡೆಯುತ್ತಿದ್ದು ಆದಷ್ಟು ಬೇಗ ಮತ್ತೆ ಕರ್ತವ್ಯದಲ್ಲಿ ತೊಡಗಿಸಿಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Key words: Coronavirus –infection- confirmed – Minister -Prabhu Chauhan