ಮಳೆರಾಯನ ಅಬ್ಬರಕ್ಕೆ ಮನೆ ಕುಸಿತ: ಕಂಗಾಲಾದ ಕುಟುಂಬ…

ಮೈಸೂರು,ಸೆಪ್ಟಂಬರ್,10,2020(www.justkannada.in): ರಾಜ್ಯದಲ್ಲಿ ವರುಣನ ಆರ್ಭಟ ಜೋರಾಗಿದ್ದು ಕೆಲ ದಿನಗಳಿಂದ ಬಿಟ್ಟು ಬಿಟ್ಟು ಮಳೆರಾಯ ಅಬ್ಬರಿಸುತ್ತಿದ್ದಾನೆ. ಈ ನಡುವೆ ಸುರಿದ ಬಾರಿ ಮಳೆಯಿಂದಾಗಿ ಮನೆ ಕುಸಿದಿರುವ ಘಟನೆ ಮೈಸೂರು ತಾಲ್ಲೂಕಿನ ಹುಯಿಲಾಳು ಗ್ರಾಮದಲ್ಲಿ ನಡೆದಿದೆ.mysore-house-collapses-rain

ವರುಣ ಅಬ್ಬರಕ್ಕೆ ಮೈಸೂರು ತಾಲ್ಲೂಕಿನ ಹುಯಿಲಾಳು ಗ್ರಾಮದ ಮಂಜುನಾಥ ಎನ್ನುವವರ ಮನೆ ನೆಲಸಮವಾಗಿದೆ. ಮಳೆಯ ಅವಾಂತರಕ್ಕೆ ಶಿಥಿಲಗೊಂಡಿದ್ದ ಗೋಡೆಗಳು ನೆಲೆ ಕಚ್ಚಿದ್ದು ಮನೆ ಕುಸಿದು ಬಿದ್ದ ಹಿನ್ನೆಲೆ ಮಂಜುನಾಥ್ ಕುಟುಂಬ ಕಂಗಾಲಾಗಿದ್ದಾರೆ.mysore-house-collapses-rain

ಇನ್ನು ಮನೆ ಕಳೆದುಕೊಂಡಿರುವ ಕುಟುಂಬಕ್ಕೆ  ಮತ್ತೆ ಮನೆ ನಿರ್ಮಿಸಿಕೊಳ್ಳಲು ಜೀವನ ಸಾಗಿಸಲು ಪ್ರಕೃತಿ ವಿಕೋಪದಡಿ ನೆರವಿನ‌ ಹಸ್ತ ಬೇಕಾಗಿದೆ.  ರಾಜ್ಯದಲ್ಲಿ ಮೈಸೂರು, ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಕಳೆದ ಎರಡು ದಿನಗಳಿಂದ ಮಳೆಯಾಗುತ್ತಿದೆ.

Key words:  mysore- house -collapses – rain.