ದೇಶದಲ್ಲಿ ಮತ್ತೆ ಕೊರೋನಾ ಏರಿಕೆ: ಒಂದೇ ದಿನದಲ್ಲಿ 41,965 ಮಂದಿಗೆ ಕೋವಿಡ್ ಸೋಂಕು ಪತ್ತೆ.

ನವದೆಹಲಿ,ಸೆಪ್ಟಂಬರ್,1,2021(www.justkannada.in):  ದೇಶದಲ್ಲಿ ಕಳೆದ ಕೆಲ ದಿನಗಳಿಂದ ಇಳಿಕೆಯತ್ತ ಸಾಗುತ್ತಿದ್ದ ಕೊರೋನಾ ಸೋಂಕು ಇದೀಗ ಮತ್ತೆ ಏರಿಕೆಯಾಗುತ್ತಿದೆ, ಹೌದು ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 41,965 ಕೋವಿಡ್‌ ಪ್ರಕರಣಗಳು ಪತ್ತೆಯಾಗಿವೆ.

ಈ ಕುರಿತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದ್ದು, ಒಂದೇ ದಿನದಲ್ಲಿ  41,965 ಮಂದಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಇದೇ ಅವಧಿಯಲ್ಲಿ 460 ಮಂದಿ  ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ.

ಇನ್ನು ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3,28,10,845ಕ್ಕೆ ಏರಿಕೆಯಾಗಿದೆ, ಸಾವಿನ ಸಂಖ್ಯೆ 4,39,020ಕ್ಕೆ ತಲುಪಿದೆ. ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 3,78,181ಕ್ಕೆ ತಲುಪಿದೆ. ಈ ನಡುವೆ ಕಳೆದ 24 ಗಂಟೆಗಳಲ್ಲಿ 33,964 ಮಂದಿ ಗುಣಮುಖರಾಗುವುದರೊಂದಿಗೆ ಈವರೆಗೂ 3,19,93,644 ಮಂದಿ ಕೊರೋನಾದಿಂದ ಚೇತರಿಸಿಕೊಂಡಿದ್ದಾರೆ.

ENGLISH SUMMARY…

Corona cases increase again in the country: 41,965 cases identified in one day
New Delhi, September 1,2021 (www.justkannada.in): The number of Corona cases which was decreasing from the last few days in the country has increased again. A total number of 41,965 cases are reported across the country in the last 24 hours.
According to the information provided by the Union Health and Family Welfare Ministry, 460 people lost their lives in the last 24 hours due to COVID-19.
With this, the total number of infected people has increased to 3,28,10,845, and the number of people who lost their lives has increased to 4,39,020. The total number of active cases in the country has reached 3,78,181. Whereas 33,965 people have recovered in the last 24 hours increasing the total number to 3,19,93,644.
Keywords: COVID-19 pandemic/ cases/ increase/ country

Key words: Corona -rise -again – india-41,965 covid cases