ಕಾವೇರಿ ಜಲವಿವಾದ ಮತ್ತು ಮೇಕೆದಾಟು ಯೋಜನೆ: ಕರ್ನಾಟಕದ ಪರ ಬ್ಯಾಟ್ ಬೀಸಿದ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್.

ಮೈಸೂರು,ಸೆಪ್ಟಂಬರ್,1,2021(www.justkannada.in):  ಕಾವೇರಿ ಜಲವಿವಾದದ ವಿಚಾರದಲ್ಲಿ ಕರ್ನಾಟಕದ ಹಿತ ಕಾಪಾಡಲು ಬಿಜೆಪಿ ಕಟಿಬದ್ದವಾಗಿದೆ ಎಂದು  ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಮೈಸೂರಿನಲ್ಲಿ ಹೇಳಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿದ ಅರುಣ್ ಸಿಂಗ್, ರಾಜ್ಯದಿಂದ ತಮಿಳುನಾಡಿಗೆ 30 ಟಿಎಂಸಿ ನೀರು ಬಿಡುಗಡೆ ಮಾಡಲು ಕಾವೇರಿ ನೀರು ನಿರ್ಬಹಣಾ ಮಂಡಳಿ ನೀಡಿರುವ ಆದೇಶವನ್ನು ಒಕ್ಕೂಟ ವ್ಯವಸ್ಥೆಯಲ್ಲಿದ್ದುಕೊಂಡು ಗೌರವಿಸುತ್ತೇವೆ. ಕಾವೇರಿ ನೀರು ನಿರ್ಹಹಣಾ ಮಂಡಳಿ ನೀಡಿರುವ ಆದೇಶವನ್ನು ಪರಿಶೀಲಿಸಲಾಗುವುದು. ಈ ವಿಚಾರದಲ್ಲಿ ಕರ್ನಾಟಕದ ಹಿತಾಸಕ್ತಿಯನ್ನು ಕಾಪಾಡುತ್ತೇವೆ ಎಂದರು.

ಮೇಕೆದಾಟು ಯೋಜನೆಗೆ ತಮಿಳುನಾಡು ಬಿಜೆಪಿ ಘಟಕ ವಿರೋಧ ವ್ಯಕ್ತಪಡಿಸುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಕರ್ನಾಟಕದ ಪರ ಬ್ಯಾಟಿಂಗ್ ಮಾಡಿದ ಅರುಣ್ ಸಿಂಗ್, ಮೇಕೆದಾಟು ಯೋಜನೆ ವಿಚಾರದಲ್ಲೂ ರಾಜ್ಯ ಸರ್ಕಾರ ಮತ್ತು ಬಿಜೆಪಿ ಕರ್ನಾಟಕದ ರೈತರ ಹಿತ ಕಾಪಾಡಲಿದೆ ಎಂದು ಭರವಸೆ ನೀಡಿದರು.

ರಾಜ್ಯ ಬಿಜೆಪಿ ಉಸ್ತುವಾರಿ ಬದಲಾಗಲಿದ್ದಾರೆಯೇ? ಎಂಬ ಪ್ರಶ್ನೆಗೆ ಹಾಗಾದರೇ ನೀವೇ ಹೇಳಿ ಯಾರು ಬರುತ್ತಿದ್ದಾರೆ? ಎಂದು ಅರುಣ್ ಸಿಂಗ್ ನಗುತ್ತಲೇ ಉತ್ತರಿಸಿದರು.

ENGLISH SUMMARY…

Kaveri river water dispute and Mekedatu project: State BJP In-charge Arun Singh bats on behalf of Karnataka
Mysuru, September 1, 2021 (www.justkannada.in): Karnataka State BJP In-charge Aurn Singh said that the party is committed to safeguarding the interest of the State in the Kaveri river water dispute issue.
Speaking in Mysuru today he informed that he would bow to the orders of the Kaveri River Water Tribunal’s order of releasing 30 TMC water to Tamil Nadu. However, he informed that the orders would be verified and the party is committed to safeguarding the interest of the state.
In his response to the Tamil Nadu BJP unit’s opposition to Karnataka Government’s Mekedatu project proposal, Arun Singh batted on behalf of the state. He assured that the party is committed to safeguarding the interest of the state and the farmers.
Keywords: Karnataka BJP In-charge/ Arun Singh/ Mysuru/ Kaveri River water row/ Mekedatu project

Key words: mekedatu project – caveri dispute- state BJP- in charge – Karnataka -Arun Singh