ಇನ್ಮುಂದೆ ಮೈಸೂರಿನಲ್ಲಿ ರಾತ್ರಿ 8 ಗಂಟೆ ಬದಲು ಸಂಜೆ 6ಕ್ಕೆ ಬಂದ್…..

kannada t-shirts

ಮೈಸೂರು,ಜು,1,2020(www.justkannada.in):  ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊರೋನಾ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆ ರಾತ್ರಿ 8 ಗಂಟೆಯ ನಂತರ ಜಾರಿಯಲ್ಲಿರುವ ಕರ್ಫ್ಯೂವನ್ನ ಸಂಜೆ 6 ಗಂಟೆಯಿಂದಲೇ ಜಾರಿ ಮಾಡಲು ಜಿಲ್ಲಾಡಳಿತ ನಿರ್ಧಾರ ಮಾಡಿದೆ.

ಮೈಸೂರಿನಲ್ಲಿ ಕೊರೋನಾ ನಿಯಂತ್ರಣ ಮಾಡಲು  ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದೆ. ಈ ಸಂಬಂಧ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್  ಜಿಲ್ಲಾಡಳಿತದ ಜತೆ ಸಭೆ ನಡೆಸಿ ಚರ್ಚಿಸಿದರು.corona-mysore-bandh-6-pm-minister-st-somashekar

ಸಭೆ ಬಳಿಕ ಈ ಬಗ್ಗೆ ಮಾಹಿತಿ ನೀಡಿದ ಸಚಿವ ಎಸ್.ಟಿ ಸೋಮಶೇಖರ್, ಇನ್ಮುಂದೆ ಮೈಸೂರಿನಲ್ಲಿ ರಾತ್ರಿ 8ಗಂಟೆ ಬದಲು ಸಂಜೆ 6ಕ್ಕೆ ಬಂದ್ ಆಗಲಿದೆ. 6ಗಂಟೆ ನಂತರ ಯಾವುದೇ ಓಡಾಟವು ಇರೋದಿಲ್ಲ, ವ್ಯಾಪಾರವೂ ಇರುವುದಿಲ್ಲ. ಕೋವಿಡ್ ನಿಯಂತ್ರಣ ಮಾಡಲು ಮೈಸೂರಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಕೋವಿಡ್ ನಿಯಂತ್ರಣ ಮಾಡಲು ಈ‌ ಕ್ರಮ ಕೈಗೊಂಡಿದ್ದೇವೆ ಎಂದರು.

ಜನರ ಓಡಾಟ ನಿಯಂತ್ರಣ ಮಾಡುವ ಸಲುವಾಗಿ ಈ ಕ್ರಮಕ್ಕೆ ಮುಂದಾಗಿದ್ದೇವೆ. ಹೀಗಾಗಿ 8ರ‌ ಬದಲು 6ಕ್ಕೆ ಕರ್ಫ್ಯೂ ಜಾರಿಯಾಗಲಿದೆ. ಶುಕ್ರವಾರದಿಂದಲೇ‌ ಈ ಆದೇಶ ಜಾರಿಯಾಗಲಿದೆ ಎಂದು ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು.

Key words: corona- Mysore –bandh-6 pm- minister- ST Somashekar

website developers in mysore