Thursday, August 13, 2026

BDA Apartments

Home Front Page ಆಸ್ಪತ್ರೆಯಲ್ಲಿ ಇತರೇ ರೋಗಿಗಳ ಜತೆ ಕೊರೋನಾ ಸೋಂಕಿತರು: ವಿಡಿಯೋ ಮಾಡಿ ಜನರಿಂದ ಆಕ್ರೋಶ…

ಆಸ್ಪತ್ರೆಯಲ್ಲಿ ಇತರೇ ರೋಗಿಗಳ ಜತೆ ಕೊರೋನಾ ಸೋಂಕಿತರು: ವಿಡಿಯೋ ಮಾಡಿ ಜನರಿಂದ ಆಕ್ರೋಶ…

ಮೈಸೂರು,ಜು,1,2020(www.justkannada.in):  ರಾಜ್ಯದಲ್ಲಿ ದಿನೇ ದಿನೇ ಕೊರೋನಾ ಪ್ರಕರಣ ಹೆಚ್ಚುತ್ತಿರುವ ನಡುವೆ ಮೈಸೂರಿನ ಆಸ್ಪತ್ರೆಯೊಂದರಲ್ಲಿ  ಕೊರೊನಾ ಪಾಸಿಟಿವ್ ಆದವರಿಗೆ ಇತರ ರೋಗಿಗಳ ಜೊತೆ ಇರಿಸಿರುವ ಆರೋಪ ಕೇಳಿ ಬಂದಿದೆ.Corona - infected - other -patients - Mysore.

ಕೆ ಆರ್ ಆಸ್ಪತ್ರೆಯ ಆವರಣದ ಹಳೆ ಜಯದೇವ ಆಸ್ಪತ್ರೆ ಕಟ್ಟಡದಲ್ಲಿ ಈ ಘಟನೆ ನಡೆದಿದೆ. ಕೊರೋನಾ ಪಾಸಿಟಿವ್ ಆದವರ ಜೊತೆ ಇತರ ರೋಗಿಗಳನ್ನ ಇಲ್ಲಿ ಇರಿಸಲಾಗಿದೆ. ಅಲ್ಲಿನ ಸಿಬ್ಬಂದಿ ಅಂತರ ಕಾಯ್ದುಕೊಂಡು ಬೆಡ್ ಹಾಕಿದ್ದು ಅದರಲ್ಲಿ ಕೊರೊನಾ ಪಾಸಿಟಿವ್ ಆದವರಿಗೆ ಇತರ ರೋಗಿಗಳ ಜೊತೆ ಇರಿಸಲಾಗಿದೆ. ಹಾಗೆಯೇ ರೋಗಿಯ ಜೊತೆಗೆ ಬಂದವರು ಸಹ ಅಲ್ಲೇ ಇದ್ದಾರೆ ಎಂದು ಹೇಳಲಾಗುತ್ತಿದೆ.

ಆಸ್ಪತ್ರೆಯ ಈ ವ್ಯವಸ್ಥೆಯ ಬಗ್ಗೆ ರೋಗಿಯ ಸಂಬಂಧಿಕರು ವಿಡಿಯೋ ಮಾಡಿ ಕಳುಹಿಸಿದ್ದಾರೆ. ಇದರಿಂದ ಇತರರಿಗೆ ಸೋಂಕು ಸುಲಭವಾಗಿ ಹರಡುವ ಸಾಧ್ಯತೆ ಹೆಚ್ಚಾಗಿದ್ದು ರೋಗಿಗಳಲ್ಲಿ ಭೀತಿ ಶುರುವಾಗಿದೆ.

Key words: Corona – infected – other -patients – Mysore.