ಕೊರೊನಾ ಮೀಟರ್: ಕರ್ನಾಟಕದಲ್ಲಿ ಮತ್ತೆ ಏರುತ್ತಿದೆ ಕೋವಿಡ್ ಸೋಂಕಿತರ ಸಂಖ್ಯೆ

ಬೆಂಗಳೂರು, ಜನವರಿ 02, 2021 (www.justkannada.in): ರಾಜ್ಯದಲ್ಲಿ ಕರೊನಾ ಪ್ರಕರಣದಲ್ಲೂ ದೊಡ್ಡ ಏರಿಕೆ ಕಂಡಿದ್ದು, ಮತ್ತೆ ಆತಂಕ ಮೂಡಿಸಿದೆ.

ಶನಿವಾರ ಒಂದೇ ದಿನ ರಾಜ್ಯದಲ್ಲಿ 1033 ಕೋವಿಡ್​ ಪ್ರಕರಣ ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿನ ಸಕ್ರಿಯ ಕೋವಿಡ್-19 ಪ್ರಕರಣ 9386ಕ್ಕೆ ತಲುಪಿದೆ.

ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ಪರಿಸ್ಥಿತಿ ಮತ್ತೆ ಹಳೆ ಪರಿಸ್ಥಿತಿಯತ್ತ ಹೋಗುತ್ತಿದೆ. ರಾಜ್ಯದಲ್ಲಿ ಪತ್ತೆಯಾದ 1033 ಪ್ರಕರಣಗಳ ಪೈಕಿ ಬೆಂಗಳೂರು ಒಂದರಲ್ಲೇ 810 ಪ್ರಕರಣಗಳು ಪತ್ತೆಯಾಗಿವೆ.

ಕಳೆದ ಸೆ.17ರಂದು 1003 ಕೋವಿಡ್​ 19 ದೃಢಪಟ್ಟಿತ್ತು. ಅದಾದ ಮೇಲೆ ಇಂದು ಕೋವಿಡ್ ಮತ್ತೆ ಸಾವಿರದ ಗಡಿ ದಾಟಿವೆ. ಹೀಗಾಗಿ ಜನ ಮತ್ತಷ್ಟು ಎಚ್ಚರಿಕೆ ವಹಿಸಬೇಕಿದೆ.