Sunday, September 20, 2026

BDA Apartments

ಡೆಲ್ಟಾ, ಒಮಿಕ್ರಾನ್ ಆಯ್ತು ಈಗ ಫ್ಲೊರೊನಾ ಕಾಟ: ಇಸ್ರೇಲ್ ನಲ್ಲಿ ಮೊದಲ ಪ್ರಕರಣ ...
Home Front Page ಡೆಲ್ಟಾ, ಒಮಿಕ್ರಾನ್ ಆಯ್ತು ಈಗ ಫ್ಲೊರೊನಾ ಕಾಟ: ಇಸ್ರೇಲ್ ನಲ್ಲಿ ಮೊದಲ ಪ್ರಕರಣ

ಡೆಲ್ಟಾ, ಒಮಿಕ್ರಾನ್ ಆಯ್ತು ಈಗ ಫ್ಲೊರೊನಾ ಕಾಟ: ಇಸ್ರೇಲ್ ನಲ್ಲಿ ಮೊದಲ ಪ್ರಕರಣ

ಬೆಂಗಳೂರು, ಜನವರಿ 02, 2021 (www.justkannada.in): ಕೊರೊನಾದಿಂದ ಕಂಗೆಟ್ಟಿರುವ ಜನತೆ ಮತ್ತೊಂದು ವೈರಸ್ ಸುದ್ದಿ ಆತಂಕಕ್ಕೀಡು ಮಾಡಿದೆ.

ಹೌದು. ಕೊರೊನಾ, ಡೆಲ್ಟಾ, ಒಮಿಕ್ರಾನ್ ನಂತರ ಮತ್ತೊಂದು ರೂಪ ಪಡೆದಿರುವ ಫ್ಲೊರೊನಾ ವೈರಸ್ ಇಸ್ರೇಲ್ ನಲ್ಲಿ ಮೊದಲ ಪ್ರಕರಣ ಪತ್ತೆಯಾಗಿದೆ.

ಇಸ್ರೇಲ್ ನಲ್ಲಿ 4ನೇ ಕೊರೊನಾ ಲಸಿಕೆ ನೀಡಲಾಗಿದ್ದು, ಬೂಸ್ಟರ್ ನೀಡಲು ಸಿದ್ಧತೆ ನಡೆದಿದೆ. ಪ್ರತಿ ನಿತ್ಯ 5000 ಕೊರೊನಾ ಸೋಂಕು ಪ್ರಕರಣಗಳು ವರದಿಯಾಗುತ್ತಿವೆ.

ಈ ನಡುವೆ ಒಮಿಕ್ರಾನ್ ಗಿಂತ ಎರಡು ಪಟ್ಟು ವೇಗಿ ಮತ್ತು ಪರಿಣಾಮಕಾರಿ ಎಂದು ಹೇಳಲಾಗುವ ಫ್ಲೊರೊನಾ ಸೋಂಕು ಪತ್ತೆಯಾಗಿದೆ