ಒಂದೆರಡು ದಿನಗಳಲ್ಲಿ ಖಾತೆ ಹಂಚಿಕೆ: ನಾಳೆಯೇ ಸಚಿವರು ಜಿಲ್ಲೆಗೆ ತೆರಳಿ ಕೊರೋನಾ , ನೆರೆ ಪರಿಶೀಲನೆ- ಸಿಎಂ ಬಸವರಾಜ ಬೊಮ್ಮಾಯಿ.

Promotion

ಬೆಂಗಳೂರು,ಆಗಸ್ಟ್,4,2021(www.justkannada.in): ಒಂದೆರಡು ದಿನಗಳಲ್ಲಿ  ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಇಂದು ವಿಧಾನಸೌಧಧಲ್ಲಿ ಸಚಿವ ಸಂಪುಟ ಸಭೆ ನಡೆಸಿದ ಬಳಿಕ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಬಸರವಾಜ ಬೊಮ್ಮಾಯಿ, ಈಗಾಗಲೇ 10 ದಿನಗಳ ಕಾಲ ಸಚಿವ ಸಂಪುಟ ರಚನೆಗೆ ಓಡಾಡಿ ಅಂತಿಮ ಮಾಡಿದ್ದೇನೆ. ಆದರೆ ಖಾತೆ ಹಂಚಿಕೆ ವಿಳಂಬ ಮಾಡಲ್ಲ. ಇಂದಿನ ಸಂಪುಟ ಸಭೆಯಲ್ಲಿ ಯಾರೂ ಸಹ ಇಂತಹದ್ದೆ ಖಾತೆ ಬೇಕು ಎಂದು ಕೇಳಿಲ್ಲ ಎಂದರು.

ಕೋವಿಡ್ ನೆರೆ ವೀಕ್ಷಣೆಗೆ ಸಚಿವರಿಗೆ ಜಿಲ್ಲೆ ಹಂಚಿಕೆ ಮಾಡಲಾಗುತ್ತದೆ. ನಾಳೆಯೇ ನೂತನ ಸಚಿವರು ಜಿಲ್ಲೆಗಳಿಗೆ ತೆರಳಿ ಕೋವಿಡ್ ನೆರೆ ಪರಿಶೀಲನೆ ನಡೆಸಲಿದ್ದಾರೆ. ಕೋವಿಡ್ ಟಾಸ್ಕ್ ಫೋರ್ಸ್ ಪುನರಚನೆ ಮಾಡಲಾಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

Key words: Corona-flood –Inspection-ministers- CM Basavaraja Bommai-cabinet meeting