ಮೊದಲ ಟೆಸ್ಟ್: ಟೀಂ ಇಂಡಿಯಾ ಬೌಲರ್ ಪರಾಕ್ರಮ, 183 ರನ್ ಗಳಿಗೆ ಇಂಗ್ಲೆಂಡ್ ಆಲೌಟ್

ಬೆಂಗಳೂರು, ಆಗಸ್ಟ್ 05, 2021 (www.justkannada.in): ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್​ ಮೊದಲ ಇನ್ನಿಂಗ್ಸ್​ನಲ್ಲಿ 183 ರನ್ ಗಳಿಗೆ ಆಲೌಟ್ ಆಗಿದೆ.

ಉತ್ತಮ ಆರಂಭ ಕಂಡಿರುವ ಭಾರತ ವಿಕೆಟ್ ಕಳೆದುಕೊಳ್ಳದೆ 21 ರನ್ ಗಳಿಸಿದೆ. ನಾಳಿನ ಆಟಕ್ಕೆ ರೋಹಿತ್ ಹಾಗೂ ರಾಹುಲ್ ವಿಕೆಟ್ ಉಳಿಸಿಕೊಂಡಿದ್ದಾರೆ.

ಮೊಹಮ್ಮದ್ ಶಮಿ ಮತ್ತು ಜಸ್ಪ್ರೀತ್ ಬುಮ್ರಾ  ಭಾರತೀಯ ವೇಗದ ಬೌಲರ್‌ಗಳು ಅದ್ಭುತ ಬೌಲಿಂಗ್ ಮಾಡಿದರು.  ರೂಟ್ 64 ರನ್ ಗಳ ಇನ್ನಿಂಗ್ಸ್ ಆಡಿದರು. ಇದು ಟೆಸ್ಟ್‌ನಲ್ಲಿ ಅವರ 60 ನೇ ಅರ್ಧಶತಕವಾಗಿದೆ.