ನಾಳೆ ಸಂಸದ ಪ್ರತಾಪ್ ಸಿಂಹ ಜತೆ ಕಾಂಗ್ರೆಸ್ ಮುಖಂಡರಿಂದ ಸಂವಾದ ಕಾರ್ಯಕ್ರಮ.

Promotion

ಮೈಸೂರು,ಸೆಪ್ಟಂಬರ್,4,2021(www.justkannada.in):  ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿ ವಿಚಾರಕ್ಕೆ ಸಂಬಂಧಿಸಿದಂತೆ ನಾಳೆ  ಮೈಸೂರು –ಕೊಡಗು ಸಂಸದ ಪ್ರತಾಪ್ ಸಿಂಹ ಅವರ ಜತೆ ಕಾಂಗ್ರೆಸ್ ಮುಖಂಡರು ಸಂವಾದ ಕಾರ್ಯಕ್ರಮ ಆಯೋಜಿಸಿದ್ದಾರೆ.

ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ವಿಚಾರದಲ್ಲಿ ಹಲವು ದಿನಗಳಿಂದ ಯಾರ ಕಾಲದಲ್ಲಿ ಆದಂತಹ ಯೋಜನೆಯಿದು ಎಂಬುದರ ಬಗ್ಗೆ ಸಂಸದ ಸಿಂಹ ಅವರ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರಗಳ ನಡುವೆ ಹೇಳಿಕೆ ಮತ್ತು ಪ್ರತಿ ಹೇಳಿಕೆಗಳು ವಾಗ್ವಾದ ನಡೆಯುತ್ತಲೇ ಇದೆ. ಈ ವಿಚಾರದಲ್ಲಿ  ವಿಷಯದ ಸತ್ಯಾಸತ್ಯತೆ ಏನು ಎಂಬುದರ ಬಗ್ಗೆ ಮಾಧ್ಯಮದವರ ಮುಂದೆ ಸಾಬೀತುಪಡಿಸಲು ಈ ಸಂವಾದವನ್ನ ಆಯೋಜಿಸಲಾಗಿದೆ.

ಕಾಂಗ್ರೆಸ್ ಪಕ್ಷದ ವಕ್ತಾರರುಗಳು ಮತ್ತು ಮಾಜಿ ಸಚಿವ ಹೆಚ್.ಸಿ ಮಹಾದೇವಪ್ಪ  ಅವರು ನಾಳೆ ಬೆಳಿಗ್ಗೆ 11-00 ಗಂಟೆಗೆ ನಗರದಲ್ಲಿರುವ ಪತ್ರಕರ್ತರ ಭವನದಲ್ಲಿ ಮೈಸೂರು ಸಂಸದ ಪ್ರತಾಪ್ ಸಿಂಹ  ಜತೆ ಈ ಸಂವಾದವನ್ನು ಏರ್ಪಡಿಸಿದ್ದಾರೆ.  ಇನ್ನು ಈ ಸಂವಾದ ಕಾರ್ಯಕ್ರಮಕ್ಕೆ ಸಂಸದ ಪ್ರತಾಪ್ ಸಿಂಹ ರವರನ್ನು ಆಹ್ವಾನಿಸಿದ್ದೇವೆ. ಇವರು ಬರುವ ನಿರೀಕ್ಷೆ ಇದೆ ಎಂದು ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್ ತಿಳಿಸಿದ್ದಾರೆ.

Key words: Conversation – Congress leaders-Mysore- MP- Pratap simha-tomorrow