ಇಬ್ಬರು ಪರಿಚಯಸ್ಥರೇ ಅಂತಾ ಗೊತ್ತಾಗಿದೆ: ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಯತ್ನ ಕೇಸ್ ಕುರಿತು ಪೊಲೀಸ್ ಆಯುಕ್ತ ಚಂದ್ರಗುಪ್ತ ಮಾಹಿತಿ.

ಮೈಸೂರು,ಸೆಪ್ಟಂಬರ್,4,2021(www,justkannada.in):  ಮೈಸೂರಿನಲ್ಲಿ ನಿನ್ನೆ ವಿದ್ಯಾರ್ಥಿನಿ ಮೇಲೆ ಹಲ್ಲೆ ಅತ್ಯಾಚಾರ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಮತ್ತು ಆರೋಪಿ ಇಬ್ಬರು ಪರಿಚಯಸ್ಥರು ಎಂದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಮಾಹಿತಿ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಪೊಲೀಸ್ ಆಯುಕ್ತ ಚಂದ್ರಗುಪ್ತ, ನಿನ್ನೆ ಮಧ್ಯಾಹ್ನ ನರಸಿಂಹರಾಜ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಊಟದ ನೆಪದಲ್ಲಿ ಬಂದು ಅತ್ಯಾಚಾರ ಆಗಿದೆ ಅಂತ ದೂರು ದಾಖಲಾಗಿತ್ತು. ಪ್ರಾಥಮಿಕ ತನಿಖೆಯಲ್ಲಿ ಇಬ್ಬರು ಪರಿಚಯಸ್ಥರು ಅಂತ ಗೊತ್ತಾಗಿದೆ. ಯಾಕೆ ಆ ಹುಡುಗಿ ಯುವಕನನ್ನು ಪರಿಚಯ ಇಲ್ಲ ಅಂತ ಹೇಳಿದ್ಲು ಗೊತ್ತಿಲ್ಲ. ಅದರ ಬಗ್ಗೆ ಕೂಡ ತನಿಖೆ ನಡೆಯುತ್ತಿದೆ ಎಂದರು.

ಆಕೆಗೆ ಮೆಡಿಕಲ್‌ ಟ್ರೀಟ್‌ ಮೆಂಟ್ ನೆಡಿತಿದೆ. 164 ಸ್ಟೇಟ್ಮೆಂಟ್ ನಂತರ ಏನಾಗುತ್ತೆ ನೋಡಬೇಕು. ಸದ್ಯ ದೂರಿನ ಆಧಾರದಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿದ್ದು, ಸದ್ಯ ಯುವಕನನ್ನ ಬಂಧಿಸಲಾಗಿದೆ ಎಂದು ಪೊಲೀಸ್ ಅಯುಕ್ತ ಡಾ.ಚಂದ್ರಗುಪ್ತ ಹೇಳಿದರು.

Key words: mysore- Police Commissioner- Chandragupta information-rape -case -student