ಕೇಂದ್ರ ತಂಡದಿಂದ ನೆರೆ ಪರಿಶೀಲನೆ: ಹೆಚ್ಚು ಅನುದಾನ ಸಿಗುವ ವಿಶ್ವಾಸವಿದೆ- ಸಿಎಂ ಬಸವರಾಜ ಬೊಮ್ಮಾಯಿ.

ಬೆಂಗಳೂರು,4,2021(www.justkannada.in):  ಕೇಂದ್ರ ಅಧ್ಯಯನ ತಂಡ ರಾಜ್ಯದಲ್ಲಿ ನೆರೆ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ನೀಡಲಿದೆ. ಕೇಂದ್ರದಿಂದ  ರಾಜ್ಯಕ್ಕೆ ಹೆಚ್ಚಿನ ಅನುದಾನ ಸಿಗಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.

ಈ ಕುರಿತು ಇಂದು ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಅಧ್ಯಯನ ತಂಡ, ಅಧಿಕಾರಿಗಳ ಜತೆ ಇಂದು ಪ್ರಾಥಮಿಕ ಸಭೆ ಮಾಡುತ್ತೇನೆ. ಅಧ್ಯಯನ ತಂಡ ಪ್ರವಾಸ ಹೋಗಿ ಬಂದ ನಂತರವೂ ಸಭೆ ಮಾಡುತ್ತೇವೆ. ಕೇಂದ್ರದ ತಂಡದ ಜತೆ ನಮ್ಮ ಅಧಿಕಾರಿಗಳೂ ಪ್ರವಾಸ ನಡೆಸಲಿದ್ದಾರೆ. ನಮ್ಮಲ್ಲಿರುವ ವರದಿ, ಮಾಹಿತಿಗಳನ್ನು ಅವರಿಗೆ ಕೊಟ್ಟು ಹಾನಿ ಬಗ್ಗೆ ಮನವರಿಕೆ ಮಾಡಿಕೊಡುತ್ತೇವೆ. ಎನ್ ಡಿಆರ್ ಎಫ್ ನಿಧಿಯಡಿ ನಮಗೆ ಸಿಗಬೇಕಾದ ಅನುದಾನ ಸಿಗುತ್ತದೆ  ಎಂದು ತಿಳಿಸಿದರು.

ಉತ್ತರ ಕರ್ನಾಟಕ, ಉತ್ತರ ಕನ್ನಡ ಜಿಲ್ಲೆಗಳು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ನರೆಯಿಂದಾಗಿ ಉಂಟಾಗಿರುವ ಹಾನಿ ಬಗ್ಗೆ ಕೇಂದ್ರ ಅಧ್ಯಯನ ತಂಡ ಪರಿಶೀಲನೆ ನಡೆಸುತ್ತದೆ.  ಅವರ ಜೊತೆ ಮತ್ತು ನಮ್ಮ ಅಧಿಕಾರಿಗಳ ಜೊತೆ ಸುದೀರ್ಘ ಚರ್ಚೆ ನಡೆಸಿ ಸಭೆ ನಡೆಸುವುದಾಗಿ  ಬೊಮ್ಮಾಯಿ ತಿಳಿಸಿದರು. ಈ ಮಧ್ಯೆ ವಿಧಾನಸೌಧದಲ್ಲಿ ಇಂದು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ಆರಂಭವಾಗಿದೆ.

Key words: flood- inspection – central team-confident –  CM- Basavaraja Bommai.