ಮೈಸೂರಿನಲ್ಲಿ ದರೋಡೆ ಶೂಟೌಟ್ ಪ್ರಕರಣ: 2 ಕೆಜಿಗೂ ಹೆಚ್ಚು ಚಿನ್ನಾಭರಣ ಕಳ್ಳತನ: ಮತ್ತೊಬ್ಬ ಆರೋಪಿಗಾಗಿ ಶೋಧಕಾರ್ಯ.

ಮೈಸೂರು,ಸೆಪ್ಟಂಬರ್,4,2021(www.justkannada.in): ಇತ್ತೀಚೆಗೆ  ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದ ದರೋಡೆ ಶೂಟ್‌ ಔಟ್ ಪ್ರಕರಣ ಸಂಬಂಧ ಆರೋಪಿಗಳು  ಸುಮಾರು 2 ಕೆಜಿಗೂ ಹೆಚ್ಚು ಚಿನ್ನಾಭರಣ ಕಳ್ಳತನ ಮಾಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ದರೋಡೆ ಮಾಡಿದವರ ಪೈಕಿ 60 ವರ್ಷದ ವೃದ್ದ ದರೋಡೆಕೋರನ ಬಳಿ ಸಿಂಹಪಾಲಿದ್ದು ಈತನೇ ಪ್ರಮುಖ ಆರೋಪಿಯಾಗಿದ್ದಾನೆ. ಆದರೆ ಈತ ಇನ್ನು ಪೊಲೀಸರ ಕೈಗೆ ಸಿಕ್ಕಿಲ್ಲ. ದೋಚಿರುವ 2 ಕೆಜಿ ಚಿನ್ನದ ಪೈಕಿ ಈತನ ಬಳಿಯೇ 1 ಕೆಜಿಗೂ ಹೆಚ್ಚು ಚಿನ್ನಾಭರಣವಿದೆ.

ಈತ 20 ವರ್ಷದವನಿದ್ದಾಗಲಿಂದಲೂ ಕಳ್ಳತನ ಮಾಡುತ್ತಿದ್ದು, ಆಭರಣ  ದರೋಡೆ ಮಾಡುವುದರಲ್ಲಿ ಪರಿಣಿತಿ ಹೊಂದಿದ್ದ. ಈತನನ್ನ ಬಾಂಬೆ ಬುಡ್ಡಾ ಅಂತಲೇ ಕರೆಯಲಾಗುತ್ತಿದೆ. ಸದ್ಯ ಪ್ರಕರಣದಲ್ಲಿ ಆರೋಪಿ ತಲೆ ತಪ್ಪಿಸಿಕೊಂಡಿದ್ದು, ಈತನನ್ನ ಬಂಧಿಸಲು ಮೈಸೂರು ಪೊಲೀಸರು ಮುಂಬೈಗೆ ತೆರಳಿ ಶೋಧಕಾರ್ಯ ನಡೆಸುತ್ತಿದ್ದಾರೆ.

ಆ 23ರಂದು‌ ನಗರದ ವಿದ್ಯಾರಣ್ಯಪುರಂನ ಅಮೃತ್ ಗೋಲ್ಡ್ ಅಂಡ್ ಸಿಲ್ವರ್ ಪ್ಯಾಲೇಸ್ ನಲ್ಲಿ ದರೋಡೆ ಶೂಟೌಟ್ ನಡೆದಿತ್ತು. ದರೋಡೆ ವೇಳೆ ಆರೋಪಿಗಳು ದಡದಹಳ್ಳಿ ಚಂದ್ರು ಎಂಬುವವರಿಗೆ ಗುಂಡು ಹಾರಿಸಿದ್ದರು. ಇದರಿಂದಾಗಿ ಚಂದ್ರು ಮೃತಪಟ್ಟಿದ್ದರು. ಈ ಕುರಿತು ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

 

ENGLISH SUMMARY…

Dacoity, shootout case in Mysuru: More than 2 kg gold ornaments stolen; hunt on for one more accused
Mysuru, Sept. 4, 2021 (www.justkannada.in): About 2 kilos of gold ornaments were stolen in the recent dacoity, and shootout incident that occurred in the cultural capital of the state Mysuru.
It is learnt that a 60-year-old person has a major role in the team of dacoits who looted a jewellery shop in Mysuru recently. He is said to be the main accused. However, he is still absconding, and the police are still hunting for him. It is also said he is in possession of more than 1 kilo of ornaments out of the total loot.
He is said to be indulged in stealing since he was 20 years old and is an expert in looting ornaments. He is called ‘Bombay Budda’. The Mysuru Police have gone to Mumbai to hunt him.
It can be recalled here that a team of dacoits had robbed the Amruth Gold and Silver Palace in Vidyaranyapuram in Mysuru on August 23. A shootout had also taken place in that incident. The robbers had shot a person named Dadadahalli Chandru during the loot, injuring him grievously. Later the victim lost his life. A case has been registered at the Vidyaranyapuram Police Station.
Keywords: Mysuru/ dacoity/ robbery/ loot/ shootout
————————————————-

Key words: Robbery- shootout -case – Mysore- 2 kg-gold