Wednesday, September 30, 2026

BDA Apartments

ನಾಳೆ ಸಂಸದ ಪ್ರತಾಪ್ ಸಿಂಹ ಜತೆ ಕಾಂಗ್ರೆಸ್ ಮುಖಂಡರಿಂದ ಸಂವಾದ ಕಾರ್ಯಕ್ರಮ BDA JK...
Home Front Page ನಾಳೆ ಸಂಸದ ಪ್ರತಾಪ್ ಸಿಂಹ ಜತೆ ಕಾಂಗ್ರೆಸ್ ಮುಖಂಡರಿಂದ ಸಂವಾದ ಕಾರ್ಯಕ್ರಮ.

ನಾಳೆ ಸಂಸದ ಪ್ರತಾಪ್ ಸಿಂಹ ಜತೆ ಕಾಂಗ್ರೆಸ್ ಮುಖಂಡರಿಂದ ಸಂವಾದ ಕಾರ್ಯಕ್ರಮ.

ಮೈಸೂರು,ಸೆಪ್ಟಂಬರ್,4,2021(www.justkannada.in):  ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿ ವಿಚಾರಕ್ಕೆ ಸಂಬಂಧಿಸಿದಂತೆ ನಾಳೆ  ಮೈಸೂರು –ಕೊಡಗು ಸಂಸದ ಪ್ರತಾಪ್ ಸಿಂಹ ಅವರ ಜತೆ ಕಾಂಗ್ರೆಸ್ ಮುಖಂಡರು ಸಂವಾದ ಕಾರ್ಯಕ್ರಮ ಆಯೋಜಿಸಿದ್ದಾರೆ.

ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ವಿಚಾರದಲ್ಲಿ ಹಲವು ದಿನಗಳಿಂದ ಯಾರ ಕಾಲದಲ್ಲಿ ಆದಂತಹ ಯೋಜನೆಯಿದು ಎಂಬುದರ ಬಗ್ಗೆ ಸಂಸದ ಸಿಂಹ ಅವರ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರಗಳ ನಡುವೆ ಹೇಳಿಕೆ ಮತ್ತು ಪ್ರತಿ ಹೇಳಿಕೆಗಳು ವಾಗ್ವಾದ ನಡೆಯುತ್ತಲೇ ಇದೆ. ಈ ವಿಚಾರದಲ್ಲಿ  ವಿಷಯದ ಸತ್ಯಾಸತ್ಯತೆ ಏನು ಎಂಬುದರ ಬಗ್ಗೆ ಮಾಧ್ಯಮದವರ ಮುಂದೆ ಸಾಬೀತುಪಡಿಸಲು ಈ ಸಂವಾದವನ್ನ ಆಯೋಜಿಸಲಾಗಿದೆ.

ಕಾಂಗ್ರೆಸ್ ಪಕ್ಷದ ವಕ್ತಾರರುಗಳು ಮತ್ತು ಮಾಜಿ ಸಚಿವ ಹೆಚ್.ಸಿ ಮಹಾದೇವಪ್ಪ  ಅವರು ನಾಳೆ ಬೆಳಿಗ್ಗೆ 11-00 ಗಂಟೆಗೆ ನಗರದಲ್ಲಿರುವ ಪತ್ರಕರ್ತರ ಭವನದಲ್ಲಿ ಮೈಸೂರು ಸಂಸದ ಪ್ರತಾಪ್ ಸಿಂಹ  ಜತೆ ಈ ಸಂವಾದವನ್ನು ಏರ್ಪಡಿಸಿದ್ದಾರೆ.  ಇನ್ನು ಈ ಸಂವಾದ ಕಾರ್ಯಕ್ರಮಕ್ಕೆ ಸಂಸದ ಪ್ರತಾಪ್ ಸಿಂಹ ರವರನ್ನು ಆಹ್ವಾನಿಸಿದ್ದೇವೆ. ಇವರು ಬರುವ ನಿರೀಕ್ಷೆ ಇದೆ ಎಂದು ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್ ತಿಳಿಸಿದ್ದಾರೆ.

Key words: Conversation – Congress leaders-Mysore- MP- Pratap simha-tomorrow