ಜಮೀರ್ ಗೆ ತಾಕತ್ ಇದ್ಧರೇ  ಯಾವ ಆಡಿಯೋ ಇದೆ ಅದನ್ನ ಬಿಡುಗಡೆ ಮಾಡಲಿ- ಹೆಚ್.ಡಿ ಕುಮಾರಸ್ವಾಮಿ ಸವಾಲು.

Promotion

ಬೆಂಗಳೂರು, ಅಕ್ಟೋಬರ್,26,2021(www.justkannada.in):  20-20 ಸರ್ಕಾರದ ವೇಳೆ ಅಧಿಕಾರ ಬಿಟ್ಟು ಕೊಡುವ  ವಿಚಾರಕ್ಕೆ ಸಂಬಂಧಿಸಿಂತೆ ಮಾತಮಾಡಿದ ಆಡಿಯೋ ಎಂದು ಹೇಳಿಕೆ ನೀಡಿದ್ಧ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಗೆ ಹೆಚ್.ಡಿ ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಮೊದಲು ಅವರು ಆ ವಿಡಿಯೋ ಬಿಡುಗಡೆ ಮಾಡಲಿ. ಜಮೀರ್ ಯಾವ ಆಡಿಯೋ ಇಟ್ಟಿಕೊಂಡಿದ್ದಾರೆ ತಾಕತ್ತಿದ್ದರೆ  ಮೊದಲು ಆ ಆಡಿಯೋ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದ್ದಾರೆ.

ಜಮೀರ್ ಬ್ಲ್ಯಾಕ್ ಮೇಲ್ ಜೀವನ ಮಾಡುತ್ತಾರೆ. ಮಾರ್ಯಾದೆ ಇಲ್ಲದವರ ಜೊತೆಗೆ ಚರ್ಚೆ ಮಾಡಲ್ಲ. ನನ್ನ ಕಾಲು ಹಿಡಿದು ಕೋಟ್ಯಂತರ ರೂ. ತೆಗೆದುಕೊಂಡಿದ್ದಾರೆ. ಈಗ ಆ ವಿಚಾರಗಳು ಯಾವುದೂ ಬೇಡ. ಮಾತನಾಡುವುದಕ್ಕೆ ನನ್ನ ಬಳಿಯೂ ಹಲವು ವಿಚಾರಗಳಿವೆ. ನಾನು ಸತ್ಯ ಮಾತನಾಡಿದರೆ, ಅದಕ್ಕೆ ಅರ್ಥ ಇರುವುದಿಲ್ಲ. ಮರ್ಯಾದೆ ಇರುವ ವ್ಯಕ್ತಿಗಳ ಜೊತೆ ಮಾತನಾಡಬೇಕು. ಮರ್ಯಾದೆ ಇಲ್ಲದ ವ್ಯಕ್ತಿಗಳ ಜತೆ ಮಾತು ಏಕೆ ಎಂದು ಹೆಚ್.ಡಿಕೆ ಪ್ರಶ್ನಿಸಿದರು.

ನಾನು ಬಿಬಿಎಂಪಿ ಕಸ ಎತ್ತುವ ಟೆಂಡರ್ ಪಡೆದಿದ್ದು ನಿಜ. ಕಸ ಹೊಡೆದಿದ್ದು ನಿಜ. ಟೆಂಡರ್ ಪಡೆದಿದ್ದರ ಕುರಿತು ಸಹ‌ ವಿವಾದವಾಯ್ತು. ಆಗ ದೇವೇಗೌಡರು ಕರೆದು ಹೇಳಿದರು. ನಾನು ಅಧಿಕಾರದಲ್ಲಿ ಇರುವಾಗ ಸರ್ಕಾರಿ ಟೆಂಡರ್ ಪಡೆಯಬೇಡಾ ಎಂದರು. ಆಗ ಸರ್ಕಾರಿ ಟೆಂಡರ್ ಪಡೆಯೋದನ್ನ ಬಿಟ್ಟೆ ಎಂದು ಕುಮಾರಸ್ವಾಮಿ ತಿಳಿಸಿದರು.

Key words: congress MLA- jameer ahmad khan-Former CM- HD kumaraswamy