ಡಿಕೆಶಿ ಕಾಸು-ಸಿದ್ಧರಾಮಯ್ಯ ಬಾಸು ಎಂಬಂತಾಗಿದೆ ಕಾಂಗ್ರೆಸ್ ನ ಸ್ಥಿತಿ- ಟ್ವಿಟ್ಟರ್ ನಲ್ಲಿ ಲೇವಡಿ ಮಾಡಿದ ರಾಜ್ಯ ಬಿಜೆಪಿ.

ಬೆಂಗಳೂರು,ಅಕ್ಟೋಬರ್,26,2021(www.justkannada.in): ‘ಡಿಕೆಶಿ ಕಾಸು – ಸಿದ್ದರಾಮಯ್ಯ ಬಾಸು’ ಎಂಬಂತಾಗಿದೆ ಕರ್ನಾಟಕ ಕಾಂಗ್ರೆಸ್ ಸ್ಥಿತಿ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಏನೇನು ಮಾಡುತ್ತೇವೆ ಎಂದು ಆಶ್ವಾಸನೆ ನೀಡುತ್ತಲೇ ಸಾಗುತ್ತಿರುವ ಸಿದ್ದರಾಮಯ್ಯ ಪರೋಕ್ಷವಾಗಿ ನಾನೇ ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಡಿಕೆಶಿಯವರದ್ದು ಬರೇ ಕನಸೇ’ ಎಂದು  ರಾಜ್ಯ ಬಿಜೆಪಿ ಘಟಕ ಲೇವಡಿ ಮಾಡಿದೆ.

ಈ  ಕುರಿತು ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಡಿಕೆಶಿ ಅವರೇ, ಸಿದ್ದರಾಮಯ್ಯ ಮತ್ತೆ ತಮ್ಮ ವರಸೆ ಶುರು ಮಾಡಿದ್ದಾರೆ. ನೀವು ಎಷ್ಟೇ ತಂತ್ರಗಾರಿಕೆ ನಡೆಸಿದರೂ ಪ್ರಯೋಜನವಿಲ್ಲ. ನಿಮ್ಮ ಮುಖ್ಯಮಂತ್ರಿ‌ ಕನಸಿಗೆ ಎಳ್ಳು ನೀರು ಬಿಡಲು ಅವರು ಸಿದ್ದರಾಗಿದ್ದಾರೆ. ನಿಮ್ಮದೀಗ ‘ಬಗಲ್ ಮೇ ದುಷ್ಮನ್’ ಪರಿಸ್ಥಿತಿ!’ ಅಸಹಾಯಕ ಡಿಕೆಶಿ ಎಂಬ ಹ್ಯಾಷ್‌ ಟ್ಯಾಗ್‌ನೊಂದಿಗೆ ಟ್ವೀಟ್ ಮಾಡಿದೆ.

‘ಅಲ್ಪಸಂಖ್ಯಾತರಿಗೆ 3 ಸಾವಿರ ಕೋಟಿ ರು. ಕಸೂತಿಗೆ 100 ಕೋಟಿ. ಅದಕ್ಕಿಷ್ಟು, ಇದಕ್ಕಿಷ್ಟು, ಸಂಪುಟದಲ್ಲಿ ಇಂತಿಂಥವರೇ ಇರುತ್ತಾರೆ… ಈ ರೀತಿ ಸಿದ್ದರಾಮಯ್ಯ ಸ್ವಯಂ ಘೋಷಣೆ ಮಾಡುತ್ತಲೇ ಇದ್ದಾರೆ. ಅಂದರೆ ತಾನೇ ಮುಂದಿನ ಸಿಎಂ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಹಾಗಾದರೆ ನಿಮ್ಮ ಕತೆಯೇನು ಡಿಕೆಶಿ’ ಎಂದು  ರಾಜ್ಯ ಬಿಜೆಪಿ ಟಾಂಗ್ ನೀಡಿದೆ.

Key words: Congress –DKS- Kasu-Siddaramaiah –Basu- BJP – Twitter