ಹೆಚ್.ಡಿಡಿ ಮತ್ತು ಕಾಂಗ್ರೆಸ್ ನಾಯಕರೇ ಸೇರಿ ಸಿದ್ಧರಾಮಯ್ಯರನ್ನ ಸೋಲಿಸುತ್ತಾರೆ- ಕೆ.ಎಸ್ ಈಶ್ವರಪ್ಪ.

Promotion

ಶಿವಮೊಗ್ಗ,ಜನವರಿ,14,2023(www.justkannada.in):  ಹೆಚ್.ಡಿ ದೇವೇಗೌಡರು ಮತ್ತು ಕಾಂಗ್ರೆಸ್ ನಾಯಕರೇ ಸೇರಿಕೊಂಡು ಈ ಬಾರಿ ಸಿದ್ಧರಾಮಯ್ಯರನ್ನ ಸೋಲಿಸುತ್ತಾರೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಭವಿಷ್ಯ ನುಡಿದರು.

ಶಿವಮೊಗ್ಗದಲ್ಲಿ ಇಂದು ಮಾತನಾಡಿದ ಕೆ.ಎಸ್ ಈಶ್ವರಪ್ಪ, ಕೋಲಾರದಲ್ಲಿ ಸಿದ್ಧರಾಮಯ್ಯ ಗೆಲ್ಲುವ ಚಾನ್ಸೇ ಇಲ್ಲ. ಮಲ್ಲಿಕಾರ್ಜುನ ಖರ್ಗೆ. ಡಾಜಿ. ಪರಮೇಶ್ಚರ್  ಮುನಿಯಪ್ಪರನ್ನ ಸಿದ್ಧರಾಮಯ್ಯ ಸೋಲಿಸಿದ್ದಾರೆ. ಹೀಗಾಗಿ   ಅದೇ ಕಾಂಗ್ರೆಸ್ ನಾಯಕರು ಸಿದ್ಧರಾಮಯ್ಯರನ್ನ ಸೋಲಿಸುತ್ತಾರೆ ಎಂದರು.

ಪಂಚಮಸಾಲಿ ಮೀಸಲಾತಿ ಹೋರಾಟ ಮುಗಿದು ಹೋದ ಕಥೆ. ಯಥಾಸ್ಥಿತಿ ಕಾಪಾಡಲು ಕೋರ್ಟ್ ಹೇಳಿದೆ. ಕಾನೂನು ತಜ್ಞರ ಜೊತೆ ಸ್ವಾಮೀಜಿಗಳು ಮಾತನಾಡಲಿ. ಕಾನೂನು ತಜ್ಞರ ಜೊತೆ ಚರ್ಚಿಸಿ ಧರಣಿ ಮಾಡಲಿ. ಇದರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಕೆ.ಎಸ್ ಈಶ್ವರಪ್ಪ ಹೇಳಿದರು.

Key words: congress-leader-Siddaramaiah-lose-election-KS Eshwarappa