ನ್ಯಾಯಾಲಯದ ಆದೇಶಗಳ ಅನುಪಾಲನಾ ಸಪ್ತಾಹ : ಬಿಡಿಎಗೆ ಸಾರ್ವಜನಿಕರ ಭೇಟಿಗೆ ತಾತ್ಕಾಲಿಕ ನಿರ್ಬಂಧ…

kannada t-shirts

ಬೆಂಗಳೂರು,ಮಾರ್ಚ್,11,2021(www.justkannada.in): ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮಾರ್ಚ್ 15 ರಿಂದ 20ರವರೆಗೆ ವಿಶೇಷ ಅನುಪಾಲನಾ ಸಪ್ತಾಹವನ್ನು ಹಮ್ಮಿಕೊಂಡಿದ್ದು ಈ ಹಿನ್ನೆಲೆಯಲ್ಲಿ ಅಂದು ಸಾರ್ವಜನಿಕರು ಭೇಟಿಗೆ ತಾತ್ಕಾಲಿಕ ನಿರ್ಬಂಧ ವಿಧಿಸಲಾಗಿದೆ.

ಉಚ್ಛ ನ್ಯಾಯಾಲಯವು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸಂಬಂಧಪಟ್ಟ ಹಲವಾರು ಪ್ರಕರಣಗಳಲ್ಲಿ Mandamus ಆದೇಶ ಹೊರಡಿಸಿದ್ದು,  ಪ್ರಕರಣಗಳನ್ನು ತುರ್ತಾಗಿ ವಿಲೇವಾರಿ ಮಾಡುವಂತೆ ಸೂಚನೆ ನೀಡಿದೆ.

ಉಚ್ಛನ್ಯಾಯಾಲಯದ ಆದೇಶವನ್ನು ಅನುಪಾಲನೆ ಮಾಡಬೇಕಾಗಿರುವ ಹಿನ್ನೆಲೆಯಲ್ಲಿ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸಲು ದಿನಾಂಕ 15-3-2021 ರಿಂದ 20-3-2021 ರವರೆಗೆ ಬೆಳಿಗ್ಗೆ 9  ಗಂಟೆಯಿಂದ ಸಂಜೆ 5.30 ರವರೆಗೆ  ಬಿಡಿಎ ವಿಶೇಷ ಅನುಪಾಲನಾ ಸಪ್ತಾಹವನ್ನು ಹಮ್ಮಿಕೊಂಡಿದೆ.

ಈ ಸಪ್ತಾಹದಲ್ಲಿ ಪ್ರಾಧಿಕಾರದ ಎಲ್ಲಾ ಶಾಖೆಗಳ ಮುಖ್ಯಸ್ಥರು / ಅಧಿಕಾರಿ / ಸಿಬ್ಬಂದಿ ವರ್ಗದವರು ಪ್ರಕರಣಗಳ ಕಡತಗಳೊಂದಿಗೆ ಪಾಲ್ಗೊಳ್ಳಲಿದ್ದಾರೆ. ಈ  ಹಿನ್ನೆಲೆಯಲ್ಲಿ  ಮಾರ್ಚ್ 15 ರಿಂದ 20ರವರೆಗೆ ಸಾಮಾನ್ಯ ಕೆಲಸ-ಕಾರ್ಯಗಳನ್ನು ಸ್ಥಗಿತಗೊಳಿಸಿ, ಅಧಿವೇಶನದ ಕೆಲಸ ಕಾರ್ಯಗಳು ಮತ್ತು ನ್ಯಾಯಾಲಯದ ಪ್ರಕರಣಗಳ ವಿಲೇವಾರಿ ಕಾರ್ಯಗಳಿಗೆ ಪ್ರಾಶಸ್ತ್ಯ ನೀಡಲಾಗಿದೆ. ಈ ಕಾರಣ ಸಪ್ತಾಹದ ಸಮಯದಲ್ಲಿ ಸಾರ್ವಜನಿಕರ ಭೇಟಿಯನ್ನು ಪ್ರಾಧಿಕಾರಕ್ಕೆ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.

Compliance- with- court orders- Temporary- restriction – public- visit -BDA.
ಕೃಪೆ-internet

ಇ-ಹರಾಜಿನ ನಿವೇಶನಗಳ ನೊಂದಣಿ ಕಾರ್ಯ ಸೇರಿದಂತೆ ಇನ್ನಿತರೆ ಕಾರ್ಯಗಳನ್ನು ಸಹ ಸ್ಥಗಿತಗೊಳಿಸಲಾಗಿದ್ದು, ಮುಂದಿನ ದಿನಗಳಲ್ಲಿ ನೊಂದಣಿಗೆ ದಿನಾಂಕವನ್ನು ನಿಗದಿಪಡಿಸಲಾಗುವುದು. ಸಾರ್ವಜನಿಕರ ಹಿತಾದೃಷ್ಟಿಯಿಂದಲೇ ಸಪ್ತಾಹವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಿಡಿಎ ತಿಳಿಸಿದೆ.

ENGLISH SUMMARY….

Court order compliance : No public visit

Hon’ble High Court of Karnataka has issued mandamus in several cases relating to the Bangalore Development Authority and directed the immediate disposal of cases. The Authority has held special campaign from 9-00am to 5:30pm from 15.03.2021 to 20.03.2021 to expedite disposal of cases as the Authority has to comply with a High Court order.

All the Officers and staff of all section of the BDA will participate with the case files during this week. For this reason, from 15.03.2021 to 20.03.2021, normal work has been suspended and session work and disposal of Court cases is preferred on priority. Because of this campaign, the public is temporarily restricted to the Authority.

Other functions like registration of e-Auction sites, have been discontinued, future dates for registration in the following days. The special campaign is held in the interest of the Public and request their cooperation.

Key words: Compliance- with- court orders- Temporary- restriction – public- visit -BDA.

website developers in mysore