ಅಮೇರಿಕಾದಲ್ಲಿ ಸಾಫ್ಟವೇರ್ ಇಂಜಿನಿಯರ್ ನಿಧನ: ಮೈಸೂರಿನಲ್ಲಿ ಅಂತ್ಯಕ್ರಿಯೆ….

ಮೈಸೂರು,ಮಾರ್ಚ್,11,2021(www.justkannada.in):   ಅಮೇರಿಕಾದಲ್ಲಿ ನಿಧನರಾದ ಮೈಸೂರು ಮೂಲದ ಸಾಫ್ಟವೇರ್ ಇಂಜಿನಿಯರ್ ಪ್ರತೀಕ್ ತೇಳ್ಕರ್ ಟಿ  ಅವರ ಪಾರ್ಥೀವ ಶರೀರ ಇಂದು ಬೆಳಿಗ್ಗೆ ಮೈಸೂರು ತಲುಪಿದ್ದು ಇಂದೇ ಅಂತ್ಯಕ್ರಿಯೆ ನೆರವೇರಿಸಲಾಯಿತು.jk

ಮೈಸೂರಿನ ಶಾರದಾದೇವಿ ನಗರದಲ್ಲಿ  ವಾಸವಾಗಿರುವ ಕಾಡಾ ಕಚೇರಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಸಹಾಯಕ ಕಾರ್ಯಪಾಲಕ ಅಭಿಯಂತರರು ಎನ್ ಬಿ ತುಕಾರಾಂ ಮತ್ತು ಏನ್ ಶಾಲಿನಿ ಅವರ ಮಗ ಅಮೇರಿಕಾದಲ್ಲಿ ಸಾಫ್ಟವೆರ್ ಇಂಜಿನಿಯರ್ ಆಗಿದ್ದ ಪ್ರತೀಕ್ ತೇಳ್ಕರ್ ಟಿ (28ವರ್ಷ )ಅವರು ತೀವ್ರ ಹೃದಯಾಘಾತ ದಿಂದ ದಿನಾಂಕ 26.2.2021ರಂದು ಅಮೇರಿಕಾದಲ್ಲಿ ನಿಧನರಾದರು.software-engineer-dies-america-funeral-mysore

ಅವರ ಪಾರ್ಥಿವ ಶರೀರ ಇದೇ ಗುರುವಾರ ಬೆಳಗಿನ ಜಾವ 2 ಗಂಟೆಗೆ ಮೈಸೂರು ತಲುಪಿತು. ನಂತರ  ಬೆಳಗ್ಗೆ 9:30ರ ವೇಳೆಗೆ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಅಂತಿಮ ವಿಧಿ ವಿಧಾನ ಗಳನ್ನು ನೆರವೇರಿಸಲಾಯಿತು.

Key words:  software engineer -dies – America-Funeral – Mysore.