ಹಲವು ಸಮುದಾಯಗಳ ಮೀಸಲಾತಿ ಹೋರಾಟ: ಸರ್ಕಾರದ ವಿರುದ್ಧ ಸಂಸದ ಶ್ರೀನಿವಾಸ್ ಪ್ರಸಾದ್ ಅಸಮಾಧಾನ…

ಮೈಸೂರು,ಫೆಬ್ರವರಿ,26,2021(www.justkannada.in):  ಮೀಸಲಾತಿಗಾಗಿ ಹಲವು ಸಮುದಾಯಗಳು ಹೋರಾಟ ಮಾಡುತ್ತಿದ್ದರೂ ಈ ಬಗ್ಗೆ ಸ್ಪಷ್ಟ ನಿಲುವು ತಾಳದ ಹಿನ್ನೆಲೆ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಸಂಸದರೇ ಆದ ಶ್ರೀನಿವಾಸ್ ಪ್ರಸಾದ್ ಕಿಡಿಕಾರಿದ್ದಾರೆ.jk

ಈ ಬಗ್ಗೆ ಮೈಸೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಸಂಸದ ಶ್ರೀನಿವಾಸ್ ಪ್ರಸಾದ್, ಮೀಸಲಾತಿ ಬಗ್ಗೆ ಸರ್ಕಾರಕ್ಕೆ ಸ್ಪಷ್ಟ ನಿಲುವು ಇಲ್ಲ. ಪ್ರತಿ ಜಾತಿ ಜನಾಂಗವು ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ. ಸರ್ಕಾರ ಇದರ ಬಗ್ಗೆ ಎಲ್ಲಾದರೂ ಹೇಳಿಕೆ ಕೊಟ್ಟಿದೆಯೇ..? ಸಂವಿಧಾನಬದ್ದವಾಗಿ ಮೀಸಲಾತಿ ಬಗ್ಗೆ ನಿರ್ಣಯ ಕೈಗೊಳ್ಳಲು ಅಧಿಕಾರ ಇದೆ ಅಂತ ಎಲ್ಲಾದರು ಸ್ಪಷ್ಟವಾಗಿ ಹೇಳಿದ್ದಾರಾ ಎಂದು ಪ್ರಶ್ನಿಸಿದರು.

ಇದು ಕೇಂದ್ರ ಸರ್ಕಾರಕ್ಕೆ ಸೇರಿದ್ದು, ಇದರ ಬಗ್ಗೆ ಕೂಲಂಕುಷವಾಗಿ ಚರ್ಚೆ ಮಾಡಿ ,ಸಮಿತಿ ರಚನೆ ಮಾಡಿ ಅದನ್ನು ಜಾರಿಗೆ ತರಲು ದಾಖಲೆ ಕೊಡಿ, ಅದನ್ನ ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡಿ ಕೇಂದ್ರಕ್ಕೆ ಕಳುಹಿಸುತ್ತೇವೆ ಇದು ಮಾತ್ರ ನಮ್ಮಿಂದ ಸಾಧ್ಯ ಅಂತ ಸರ್ಕಾರ ಹೋರಾಟಗಾರರಿಗೆ ಹೇಳಿದೆಯೇ..? ವೇದಿಕೆಯಲ್ಲಿ ಕೇಳಿದಾಗಲೆಲ್ಲಾ ಮೀಸಲಾತಿ ಕೊಡಲು ಆಗಲ್ಲ ಅಂತ ಸ್ಪಷ್ಟವಾಗಿ ಹೇಳಿದ್ದೀರಾ.? ಇದನ್ನ ಸರ್ಕಾರ ಸ್ಪಷ್ಟ ಪಡಿಸಬೇಕು ಎಂದು ಸಂಸದ ಶ್ರೀನಿವಾಸ್ ಪ್ರಸಾದ್ ಸಲಹೆ ನೀಡಿದರು.

ಪಂಚಮಶಾಲಿಗಳು ನಮ್ಮ ಪಕ್ಷದ ಬೆನ್ನೆಲುಬು ಅವರು ನಮ್ಮನ್ನ 2ಎಗೆ ಸೇರಿಸಿ ಎಂದು ತಿರುಗಿಬಿದ್ದಿದ್ದಾರೆ. ಅವರನ್ನ ಸೇರಿಸುತ್ತೀರೇನೊ..? 2ಎ ಅಲ್ಲಿ  ಇರುವವರಿಗೆ ಹಾಗಿದ್ರೆ ಮೀಸಲಾತಿ ಹೆಚ್ವು ಮಾಡ್ತಿರಾ..? ಹಾಗೆ ಮಾಡಲು ಸಂವಿಧಾನದಲ್ಲಿ ಅವಕಾಶ ಇದೆಯೆ..? ಈ ವಿಚಾರವಾಗಿ ಸರ್ಕಾರದ ಸ್ಪಷ್ಟ ನಿಲುವು ಬೇಡವೆ..? ಈ ವಿಚಾರದಲ್ಲಿ ಎಲ್ಲರೂ ಗೊಂದಲದಲ್ಲಿ ಇದ್ದೇವೆ. ಸರ್ಕಾರ ಬಂದು ಎರಡು ವರ್ಷ ಆದರೂ  ಎಲ್ಲೆಲ್ಲಿ ನಾಯಕತ್ದ ಕೊರತೆ ಇದೆ ಜನಾಂಗ ಸಮಸ್ಯೆ ಇದೆ, ಯಾವ ಜನಾಂಗಕ್ಕೆ ಪ್ರಾತಿನಿಧ್ಯ ಕೊಡಬೇಕು ಅನ್ನೋದನ್ನ ಅಲೋಚನೆ ಮಾಡಿದ್ದೇರೇನು..? ಎಂದು ಕಿಡಿಕಾರಿದರು.

ಕೊವೀಡ್ ನಿಂದ ರಾಷ್ಟ್ರ ತತ್ತರಿಸಿ ಹೋಗಿದೆ. ರೈತರ ದೊಡ್ಡ ಚಳುವಳಿಯಾಗುತ್ತಿದೆ, ಎಂಪಿಗಳ ಸಂಬಳ ಕಡಿತವಾಗಿದೆ. ಅಭಿವೃದ್ಧಿಗೆ ಹಣ ಬರ್ತಾ ಇಲ್ಲ. ಮೋದಿಯವರ ಮೇಲೆ ವಿಶ್ವಾಸವಿಟ್ಟು ಜನ ಎರಡನೇ ಬಾರಿ ಗೆಲ್ಲಿಸಿದ್ದಾರೆ, ಇದನ್ನ ನಾವು ಉಳಿಸಿಕೊಳ್ಳಬೇಕು. ನಾವು ಪಕ್ಷದ ಸಂಘಟನೆಗೆ ದುಡಿದಿರುವಂತವರು ಕಾರ್ಯಕಾರಣಿಯಲ್ಲಿರುವವರು ನಮ್ಮ ಬಿಚ್ಚು ಮನಸ್ಸಿನ ಸಲಹೆ ನಾಯಕರಿಗೆ ತಿಳಿಸೋಣ . ಮೀಸಲಾತಿ ವಿಚಾರವಾಗಿ ಸರ್ಕಾರ ಹಿಂದೇಟಾಕದೇ ಸ್ಪಷ್ಟ ನಿಲುವು ತೆಗೆದುಕೊಳ್ಳಬೇಕು. ನಮ್ಮ ಹೇಳಿಕೆಗಳು ಸ್ಪಷ್ಟವಾಗಿರಬೇಕು ಎಂದು ಸಂಸದ ಶ್ರೀನಿವಾಸ್ ಪ್ರಸಾದ್  ತಿಳಿಸಿದರು.community –reservation-struggle-MP -Srinivas Prasad - against -government

ಮೀಸಲಾತಿಗಳು ರಾಜಕೀಯ ಪ್ರೇರಿತ ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ಶ್ರೀನಿವಾಸ್ ಪ್ರಸಾದ್, ರಾಜಕೀಯ ಪ್ರೇರಿತವಾದ್ರೆ ಮುಖ್ಯಮಂತ್ರಿಗಳ,ಕಾನೂನು ಸಚಿವರು ಈ ಬಗ್ಗೆ ಹೇಳಬೇಕು. ಪಕ್ಷದ ಕೋರ್ ಕಮಿಟಿಯಲ್ಲಿ ಚರ್ಚಿಸಬೇಕು, ಆದರೆ ಇದರ ಬಗ್ಗೆ ಸ್ಪಷ್ಟ ಹೇಳಿಕೆಗಳೇ ಬರ್ತಾ ಇಲ್ಲ. ಪಕ್ಷದಲ್ಲಿ ಸ್ಪಷ್ಟ ನಿಲುವಿಲ್ಲ ಗೊಂದಲದಲ್ಲಿ ಸಿಲುಕಿದ್ದೇವೆ. ಮಠಾಧಿಪತಿಗಳ ಹೋರಾಟದ ಬಗ್ಗೆ ನಾನು ಮಾತನಾಡಲ್ಲ. ಯಾರು ಏನು ಹೇಳಿದ್ದಾರೋ ಗೊತ್ತಿಲ್ಲ. ಸರ್ಕಾರ ಸ್ಪಷ್ಟ ನಿಲುವು, ಹೇಳಿಕೆಗಳ ಮೂಲಕ ಜನರ ಮನಸ್ಸಿನ ಸಂಶಯ ಹೋಗಲಾಡಿಸಬೇಕು ಎಂದು ಹೇಳಿದರು.

Key words: community –reservation-struggle-MP -Srinivas Prasad – against -government