ಕ್ಷೇತ್ರದ ಜನರ ಸಮಸ್ಯೆ ಆಲಿಸಲು ಕಾರ್ಯಾಲಯ ಆರಂಭ: ಸಂಸದ ಪ್ರತಾಪ್ ಸಿಂಹಗೆ ಶುಭ ಕೋರಿದ ನಗರದ ಬಿಜೆಪಿ ಮುಖಂಡರು..

ಮೈಸೂರು,ಆ,16,2019(www.justkannada.in): ಕ್ಷೇತ್ರದ ಜನರ ಸಮಸ್ಯೆ ಆಲಿಸುವ ಸಲುವಾಗಿ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಕಾರ್ಯಾಲಯ ಆರಂಭಿಸಿದ್ದು ಇಂದು ಕಾರ್ಯಾಲಯದ ಉದ್ಘಾಟನೆ ನೆರವೇರಿತು.

ಮೈಸೂರಿನ ಜಲದರ್ಶಿನಿಯಲ್ಲಿರುವ ಹಳೇ ಕಾರ್ಯಾಲಯವನ್ನೆ ಸಂಸದ ಪ್ರತಾಪ್ ಸಿಂಹ ಮುಂದುವರೆಸಿದ್ದು ಎರಡನೇ ಅವಧಿಗೆ ಸಂಸದರಾಗಿ ಆಯ್ಕೆಯಾದ ನಂತರ ಮತ್ತೆ ಕಚೇರಿ ಕಾರ್ಯಾರಂಭ ಮಾಡಿದೆ. ಕಾರ್ಯಲಯ ಉದ್ಘಾಟನೆ ಇಂದು ನೆರವೇರಿತು. ಸಂಸದ ಪ್ರತಾಪ್ ಸಿಂಹಗೆ ಶಾಸಕ ಎಸ್ ಎ  ರಾಮದಾಸ್, ನಾಗೇಂದ್ರ, ಜೆಪಿ ಜಯಪ್ರಕಾಶ್, ಸೇರಿದಂತೆ ಹಲವು  ಬಿಜೆಪಿ ಮುಖಂಡರು ಶುಭಕೋರಿದರು.

ಬಳಿಕ ಮಾತನಾಡಿದ ಅವರು,  2020ಕ್ಕೆ ಬೆಂಗಳೂರು ಮೈಸೂರು 10 ಪಥದ ರಸ್ತೆ ಕಾಮಗಾರಿ ಪೂರ್ಣಗೊಳ್ಳಲಿದೆ. ಎರಡನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾದ ನಂತರ ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಚುರುಕುಗೊಳಿಸಲಾಗುತ್ತಿದೆ. ಒಂದು ನಗರ ಅಭಿವೃದ್ಧಿಯಾಗಬೇಕಾದರೇ ರಸ್ತೆ ವಿಮಾಯಯಾನ ಮೂಲಭೂತ ಸೌಕರ್ಯಗಳು ಬೇಕಾಗಿರುವ ಹಿನ್ನಲೆಯಲ್ಲಿ ಮೈಸೂರು ನಗರಕ್ಕೆ ಉಡಾನ್ ಯೋಜನೆಯಲ್ಲಿ ಮತ್ತೆ ಮೂರು ವಿಮಾನ ಹಾರಾಟಕ್ಕೆ ಅನುವು ಮಾಡಿಕೊಡಲಾಗಿದೆ ಎಂದರು.

2020ರ ದಸರಾ ಮಹೋತ್ಸವದ ವೇಳೆಗೆ ಮೈಸೂರು ಬೆಂಗಳೂರಿನ 10 ಪಥದ ರಸ್ತೆಯನ್ನು  7600 ಕೋಟಿ ರೂ. ಗಳಲ್ಲಿ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲಾಗಿವುದು. ಮುಂದಿನ ಎರಡು ತಿಂಗಳಲ್ಲಿ ರಸ್ತೆ ಕಾಮಗಾರಿಯ ಭೂಮಿಯನ್ನು ವಶಪಡಿಸಿಕೊಳ್ಳಲಾಗುವುದು. ಮೈಸೂರು ಹಾಗೂ ಕುಶಾಲನಗರಕ್ಕೆ ರೈಲು ಸಂಚಾರದ ಯೋಜನೆಗೆ ಪರಿಕ್ಷರಣೆ ಪೂರ್ಣಗೊಂಡಿದೆ. ಕೆಲವೇ ದಿನಗಳಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿವುದು ಎಂದು ತಿಳಿಸಿದರು.

ರಾಜ್ಯದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾದ ನಂತರ ರಾಜ್ಯ ಅಭಿವೃದ್ಧಿ ಪಥದತ್ತ ಸಾಗಲಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಒಡಂಬಡಿಕೆಯಿಂದ ರಾಜ್ಯದ ಜ್ವಲಂತ ಸಮಸ್ಯೆಗಳನ್ನು ಬಗೆ ಹರಿಸಲಿದ್ದೇವೆ. ಇತ್ತೀಚೆಗೆ ನೆರೆ ಬಂದ ಪ್ರದೇಶದ ಸಂತ್ರಸ್ತರಿಗೆ ನಾಡಿನ ಜನತೆ ಹಾಗೂ ಸಂಘ ಸಂಸ್ಥೆಗಳು ಸಹಾಯ ಹಸ್ತ ಚಾಚಿ ಮನವಿಯತೆ ಮೆರೆದಿದ್ದಾರೆ. ಯಡಿಯೂರಪ್ಪ ಮುಖ್ಯಮಂತ್ರಿಯಾದ ನಂತರ ಎಲ್ಲ ಜಲಾಶಯಗಳು ಭರ್ತಿಯಾಗಿದ್ದು ಎಲ್ಲರೂ ಸಂತಸಗೊಂಡಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

Key words: Commencement -office -hear -problem – people –MP prathapsimha-mysore