ಸೋನಿಯಾಗಾಂಧಿ ರಾಹುಲ್ ಗಾಂಧಿ ದೇವರ ಮಕ್ಕಳಾ..? ಯಾವ ಪುರುಷಾರ್ಥಕ್ಕೆ ಹೋರಾಟ- ಶಾಸಕ ರೇಣುಕಾಚಾರ್ಯ ಕಿಡಿ.

ಬೆಂಗಳೂರು,ಜುಲೈ,22,2022(www.justkannada.in):  ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನ ಇಡಿ ವಿಚಾರಣೆ ಮಾಡುತ್ತಿರುವುದನ್ನ ವಿರೋಧಿಸಿ ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆಗೆ ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ ಕಿಡಿಕಾರಿದ್ದಾರೆ.

ಈ ಕುರಿತು ಮಾತನಾಡಿರುವ ಶಾಸಕ ರೇಣುಕಾಚಾರ್ಯ, ಯಾವ ಪುರುಷಾರ್ಥಕ್ಕೆ ಹೋರಾಟ ಮಾಡುತ್ತೀರಿ.. ನಿನ್ನೆ ರಮೇಶ್ ಕುಮಾರ್ ಸತ್ಯ ಹೇಳಿದ್ದಾರೆ. ಡಿಕೆ ಶಿವಕುಮಾರ್ ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಿದ್ರು. ಸೋನಿಯಾಗಾಂಧಿ ಅವರನ್ನ ಇಡಿ ವಿಚಾರಣೆ ನಡೆಸುತ್ತಿದೆ. ಆದರೆ ಇದರ ವಿರುದ್ದ ಪ್ರತಿಭಟನೆ ನಡೆಸುತ್ತಿದ್ದೀರಾ. ಸೋನಿಯಾ , ರಾಹುಲ್ ದೇವರ ಮಕ್ಕಳಾ..? ಹೋರಾಟಕ್ಕೆ ರೌಡಿ ನಲಪಾಡ್ ಕಳುಹಿಸುತ್ತೀರಾ..?  ಈಗಾಗಲೇ ತಿಂದು ತೇಗಿದ್ದೀರಿ . ಮತ್ತೆ ಹೋರಾಟ ಮಾಡ್ತೀರಾ..? ಎಂದು ವಾಗ್ದಾಳಿ ನಡೆಸಿದರು.

ಸಿಎಂ ಅಭ್ಯರ್ಥಿ ಸ್ಥಾನಕ್ಕಾಗಿ ಡಿ.ಕೆ ಶಿವಕುಮಾರ್ ಮತ್ತು ಸಿದ್ಧರಾಮಯ್ಯ ನಡುವೆ ಫೈಟ್ ಕುರಿತು ಪ್ರತಿಕ್ರಿಯಿಸಿದ ರೇಣುಕಾಚಾರ್ಯ,  ಕೂಸು ಹುಟ್ಟುವ ಮುಂಚೇಯೇ ಸಿಎಂ ಅಂತೀರಿ. ಜಾತಿ ಹೆಸರಲ್ಲಿ ಮತ ಕೇಳ್ತೀರಾ ನಾಚಿಕೆ ಆಗಲ್ವಾ..? ಮುಂದೆಯೂ ಬಿಜೆಪಿಯೇ ಅಧಿಕಾರಕ್ಕೆ ಬರುತ್ತೆ ಎಂದು ಗುಡುಗಿದರು.

Key words: ED-Sonia Gandhi-congress-protest-MP Renukacharya