ಪ್ರೇಯಸಿಯನ್ನ ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ಯುವಕ.

ಬೆಳಗಾವಿ,ಜುಲೈ,22,2022(www.justkannada.in): ಪ್ರೇಯಸಿಯನ್ನ ಕೊಂದು ಬಳಿಕ ಯುವಕ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಗಾವಿಯ ಬಸವ ಕಾಲೊನಿಯಲ್ಲಿ ನಡೆದಿದೆ.

ಸವದತ್ತಿ ತಾಲ್ಲೂಕಿನ ಬೂದಿಗೊಪ್ಪ ನಿವಾಸಿ ರಾಮಚಂದ್ರ ತೆಣಗಿ (26) ಹಾಗೂ ಮದ್ಲೂರು ಮೂಲದ ರೇಣುಕಾ ಪಚ್ಚಣ್ಣವರ (28) ಮೃತಪಟ್ಟವರು. ನಗರದ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ರೇಣುಕಾ ಹಾಗೂ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ವಿಷಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಮಚಂದ್ರ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದರು. ರಾಮಚಂದ್ರ ತೆಣಗಿ ವಿಶ್ವವಿದ್ಯಾಲಯದ ಹಾಸ್ಟೆಲಿನಲ್ಲಿ ವಾಸವಾಗಿದ್ದ. ರೇಣುಕಾ ಅವರು ಬಸವ ಕಾಲೊನಿಯ ಮನೆಯೊಂದರಲ್ಲಿ ಒಬ್ಬರೇ ಬಾಡಿಗೆ ಮಾಡಿಕೊಂಡಿದ್ದರು.

ಈ ಮಧ್ಯೆ ಇತ್ತೀಚೆಗೆ ರೇಣುಕಾ ರಾಮಚಂದ್ರನನ್ನ ಕಡೆಗಣಿಸುತ್ತಿದ್ದಿದ್ದು,  ಗುರುವಾರ ರಾತ್ರಿ ಪ್ರೇಮಿಗಳಿಬ್ಬರೂ ಇದೇ ಮನೆಯಲ್ಲಿ ಮಾತನಾಡಲು ಸೇರಿದ್ದರು. ಈ ವೇಳೆ ರೇಣುಕಾ ಅವರ ಕುತ್ತಿಗೆಗೆ ಸ್ಕಿಪ್ಪಿಂಗ್ ವೈರಿನಿಂದ ಬಿಗಿದು ಕೊಲೆ ಮಾಡಿದ ಆರೋಪಿ ರಾಮಚಂದ್ರ, ಅದೇ ವೈರಿನಿಂದ ತಾನೂ ನೇಣಿಗೆ ಶರಣಾಗಿದ್ದಾನೆ ಎನ್ನಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Key words:  young man – committed -suicide –killing- his lover