ದಸರಾ ಹಿನ್ನೆಲೆ, ಅಧಿಕಾರಿಗಳ ಜತೆ ಕೋವಿಡ್ ಸಭೆ : ಮಾಸ್ಕ್ ಧರಿಸದ ಸಿಎಮ್..!

ಬೆಂಗಳೂರು, ಅಕ್ಟೊಬರ್ 11,2020(www.justkannada.in):  ರಾಜ್ಯದಲ್ಲಿ ದಿನೇ ದಿನೇ ಕೊರೋನಾ ಮಹಾಮಾರಿ ಹೆಚ್ಚುತ್ತಿದ್ದು ಈ ಮಧ್ಯೆ ಕೊರೋನಾ ಬಗ್ಗೆ ಜಾಗೃತಿ ವಹಿಸುವಂತೆ ಸೂಚಿಸುವ ಸಿಎಂ ಬಿಎಸ್ ಯಡಿಯೂರಪ್ಪ ಅವರೇ ಸಭೆಯಲ್ಲಿ ಮಾಸ್ಕ್ ಧರಿಸದೇ  ಇರುವುದು ಕಂಡು ಬಂದಿದೆ.jk-logo-justkannada-logo

ಹೌದು. ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ಮೈಸೂರು ದಸರಾ ಹಬ್ಬದ ಸಂದರ್ಭದಲ್ಲಿ ಕೋವಿಡ್ 19 ಹರಡದಂತೆ  ಕೈಗೊಳ್ಳಬೇಕಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚಿಸಿದರು.

ಸಿಎಂ ಬಿಎಸ್ ಯಡಿಯೂರಪ್ಪ ಅಧಿಕಾರಿಗಳ ಜತೆ ಕೋವಿಡ್ ಸಭೆ ನಡೆಸಿ ಚರ್ಚಿಸಿದರು.  ಈ ವೇಳೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ: ಕೆ.ಸುಧಾಕರ್, ಮುಖ್ಯ ಕಾರ್ಯದರ್ಶಿ ಟಿ. ಎಂ.ವಿಜಯಭಾಸ್ಕರ್, ಆರೋಗ್ಯ ಇಲಾಖೆ ಕಾರ್ಯದರ್ಶಿ ಜಾವೇದ್ ಅಖ್ತರ್, ಆಯುಕ್ತ ಪಂಕಜ್ ಕುಮಾರ್ ಪಾಂಡೆ, ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಪ್ರವಾಸೋದ್ಯಮ ಇಲಾಖೆ ಪ್ರಧಾನ ಕಾರ್ಯದರ್ಶಿ ಟಿ. ಕೆ.ಅನಿಲ್ ಕುಮಾರ್  ಉಪಸ್ಥಿತರಿದ್ದರು.

ಈ ಮಧ್ಯೆ ರಾಜ್ಯಾದ್ಯಂತ ಕೊರೋನಾ ಹರಡುತ್ತಿದ್ದು,  ಕೊರೋನಾಗೆ ಇನ್ನು ಔಷಧ ಕಂಡು ಹಿಡಿಯದಿರುವ ಹಿನ್ನೆಲೆ ಜನರಲ್ಲಿ ಅರಿವು ಮೂಡಿಸಲು ಸರ್ಕಾರದಿಂದ ಹಲವು ಜಾಗೃತಿ ಕಾರ್ಯಕ್ರಮಗಳು ಮಾಡಲಾಗುತ್ತದೆ. ಮಾಸ್ಕ್ ಕಡ್ಡಾಯ, ಸಾಮಾಜಿಕ ಅಂತರ ಕಾಯ್ದಕೊಳ್ಳುವಿಕೆ ಮುಂತಾದ ಸಲಹೆಗಳನ್ನ ನೀಡಿಲಾಗುತ್ತಿದ್ದು, ಮಾಸ್ಕ್ ಧರಿಸದಿದ್ದರೇ ದಂಡವನ್ನೂ ವಿಧಿಸಲಾಗುತ್ತಿದೆ. ಆದರೆ ಕೊರೋನಾ ಜಾಗೃತಿ ಮೂಡಿಸುವ ಬಗ್ಗೆ ಮಾತನಾಡುವ ಸಿಎಂ ಬಿಎಸ್ ಯಡಿಯೂರಪ್ಪ ಅವರೇ ಸಭೆಯಲ್ಲಿ ಮಾಸ್ಕ್ ಧರಿಸದೇ ಇರುವುದು ನಿಜಕ್ಕೂ ಎಷ್ಟು ಸರಿ ಎಂಬ ಪ್ರಶ್ನೆ ಉದ್ಬವವಾಗಿದೆ.

ಇನ್ನು ‘ಜಸ್ಟ್ ಕನ್ನಡ ಡಾಟ್ ಇನ್’  ಈ ಬಾರಿಯ ಮೈಸೂರು ದಸರಾ ಉದ್ಘಾಟಕರಾದ ಸಿ.ಎನ್ ಮಂಜುನಾಥ್ ಅವರನ್ನ ಸಂದರ್ಶಿಸಿದಾಗ,  ಮಾತನಾಡುವ ವೇಳೆ ಮಾಸ್ಕ್ ಧರಿಸಿಯೇ ಮಾತನಾಡಬೇಕು. ಮಾಸ್ಕ್ ಧರಿಸದೇ ಅಥವಾ ಮಾಸ್ಕ್ ತೆಗೆದು ಮಾತನಾಡಿದರೇ ಅದು ಪ್ರಯೋಜನವಾಗುವುದಿಲ್ಲ ಎಂದಿದ್ದರು.

Key words: cm bs yeddyurappa-no mask-dasara-meeting