ಬಿ.ಎಸ್ ಯಡಿಯೂರಪ್ಪ ಮುಸ್ಲೀಂ ಪರನೂ ಅಲ್ಲ, ಹಿಂದೂ ಪರನೂ ಅಲ್ಲ-ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಕಿಡಿ…

Promotion

ಬೆಂಗಳೂರು,ಅ,3,2019(www.justkannada.in):  ಸಿಎಂ ಬಿಎಸ್ ಯಡಿಯೂರಪ್ಪ ಮಸ್ಲೀಂ ಪರನೂ ಅಲ್ಲ  ಹಿಂದೂ ಪರನೂ ಅಲ್ಲ ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಕಿಡಿಕಾರಿದರು.

ಕಾರ್ಯಕ್ರಮವೊಂದರೆಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ದ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಏಕವಚನದಲ್ಲೇ ಮಾತನಾಡಿರುವ ವಿಡಿಯೋ ತುಣುಕು ಈಗ ವೈರಲ್ ಆಗಿದೆ. ಬಿಎಸ್ ಯಡಿಯೂರಪ್ಪನನ್ನ ಮುಸ್ಲೀಂಮರು ನಂಬಬಾರದು. ಬಿಎಸ್ ಯಡಿಯೂರಪ್ಪಗೆ ಅಧಿಕಾರದ ಆಸೆ ಇದೆ.  ಬಿಎಸ್ ವೈ ಪ್ಯಾಂಟ್ ಕಳಚಿದ್ರೆ ಚಡ್ಡಿ ಕಾಣುತ್ತೆ ಎಂದು ಆರ್ ಎಸ್ ಎಸ್ ಪರ ಎಂದು ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಹಾಗೆಯೇ ಬಿಎಸ್ ಯಡಿಯೂರಪ್ಪ ಕೆಜೆಪಿ ಪಕ್ಷ ಕಟ್ಟಿದ್ದ ವೇಳೆ ಮುಸ್ಲೀಂಮರ ಮತ ಪಡೆಯಲು ಟಿಪ್ಪು ಜಯಂತಿ ಆಚರಿಸಿದ್ರು ಶೋಭಾಕರಂದ್ಲಾಜೆ ಬಿಎಸ್ ವೈ ಟಿಪ್ಪುಜಯಂತಿಯಲ್ಲಿ ಪಾಲ್ಗೊಂಡಿದ್ದರು. ಬಿಎಸ್ ವೈಗೆ ಅಧಿಕಾರದ ಆಸೆ ಇದೆ. ಅಧಿಕಾರಕ್ಕಾಗಿ ಬಿಎಸ್ ವೈ ಎಲ್ಲವನ್ನೂ ಮಾಡುತ್ತಾರೆ ಎಂದು ಜಮೀರ್ ಅಹ್ಮದ್ ಖಾನ್ ಹರಿಹಾಯ್ದಿದ್ದಾರೆ.

Key words: CM  bs yeddyurappa-hindhu-muslim-formerminister-jameer ahamad khan