ಹರ್ ಘರ್ ತಿರಂಗಾ ಅಭಿಯಾನಕ್ಕೆ ಸಿಎಂ ಬೊಮ್ಮಾಯಿ ಚಾಲನೆ: ಸಾವಿರಾರು ಜನರ ಕೈಯಲ್ಲಿ ರಾರಾಜಿಸಿದ ರಾಷ್ಟ್ರಧ್ವಜಗಳು.

ಬೆಂಗಳೂರು,ಆಗಸ್ಟ್,13,2022(www.justkannada.in): 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ  ದೇಶಾದ್ಯಂತ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸಲಾಗುತ್ತಿದ್ದು, ಇಂದಿನಿಂದ ಹರ್ ಘರ್ ತಿರಂಗಾ ಅಭಿಯಾನ ಆರಂಭವಾಗಿದೆ.

ಇಂದಿನಿಂದ ಆಗಸ್ಟ್ 15ರವರೆಗೆ  ದೇಶದ  ಪ್ರತಿ ಮನೆಯಲ್ಲೂ ರಾಷ್ಟ್ರಧ್ವಜ ರಾರಾಜಿಸಲಿದ್ದು, ರಾಜ್ಯದಲ್ಲಿ ಹರ್ ಘರ್ ತಿರಂಗಾ ಅಭಿಯಾನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.  ವಿಧಾನಸೌಧಧ ಮೆಟ್ಟಿಲಿನಲ್ಲಿ ಸಾವಿರಾರು ಜನ ಜಮಾವಣೆಗೊಂಡಿದ್ದು ಸಾವಿರಾರು ಜನರ ಕೈಯಲ್ಲಿ ರಾಷ್ಟ್ರಧ್ವಜ ರಾರಾಜಿಸಿತು. ಸಿಎಂ ಬೊಮ್ಮಾಯಿಗೆ ಸಚಿವರು ಸಾಥ್ ನೀಡಿದರು.

ಹರ್ ಘರ್ ಅಭಿಯಾನ ಚಾಲನೆ ಬಳಿಕ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ,  ಹರ್ ಘರ್ ಅಭಿಯಾನ ಯಶಸ್ವಿಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.  ಎಲ್ಲಾ ಗ್ರಾಮ ಪಂಚಾಯಿತಿಗಳಿಗೂ ಧ್ವಜ ವಿತರಣೆ ಮಾಡಲಾಗಿದೆ.   ಈಗಾಗಲೇ 1 ಕೋಟಿ 8 ಲಕ್ಷ ಧ್ವಜ ವಿತರಿಸಿದ್ದೇವೆ ಎಂದರು.

ಇಂದು ವಿಶ್ವ ಅಂಗಾಂಗ ದಿನ ಹಿನ್ನೆಲೆ  ನಾವು ಸತ್ತ ಮೇಲೂ ನಮ್ಮ ಅಂಗಾಂಗ ದಾನ ಮಾಡಬೇಕು. ಪುನೀತ್  ರಾಜ್ ಕುಮಾರ್ ಅವರು ಅಂಗಾಂಗ ದಾನ ಮಾಡಿದ್ರು. ಅಪ್ಪು ನಾಲ್ಕು ಜನರಿಗೆ ದೃಷ್ಠಿ ನೀಡಿದ್ದಾರೆ. ಸಾಧಕನಿಗೆ ಸಾವಿಲ್ಲ. ಸಾವಿನ ನಂತರೂ ಬದುಕಬಹುದು. ಯುವಕರೆಲ್ಲಾ ಅಂಗಾಂಗ ದಾನ ಮಾಡಬೇಕು. ನಾನೂ ಕೂಡ ಅಂಗಾಂಗ ದಾನಕ್ಕೆ ಸಹಿ ಹಾಕಿದ್ದೇನೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

Key words: CM Bommai – Har Ghar Tiranga- campaign