ಕಾಮಾಲೆ ಕಣ್ಣಿಗೆ ಕಾಣುವುದೆಲ್ಲಾ ಹಳದಿಯೇ : ಸಿದ್ಧರಾಮಯ್ಯಗೆ ಮಾಜಿ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಟಾಂಗ್.

ಬೆಂಗಳೂರು,ಆಗಸ್ಟ್,13,2022(www.justkannada.in): ಹರ್ ಘರ್ ತಿರಂಗಾ ಅಭಿಯಾನ ಕುರಿತು ಟೀಕಿಸಿ ಆರ್ ಎಸ್ ಎಸ್ ಕಚೇರಿ ಮೇಲೆ ರಾಷ್ಟ್ರಧ್ವಜ ಹಾರಿಸಲ್ಲ ಎಂದು ಆರೋಪಿಸಿದ್ಧ ವಿಪಕ್ಷ ನಾಯಕ ಸಿದ್ಧರಾಮಯ್ಯಗೆ ಮಾಜಿ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿದ ಡಿ.ವಿ ಸದಾನಂದಗೌಡ, ಕಾಮಾಲೆ ಕಣ್ಣಿಗೆ ಕಾಣುವುದೆಲ್ಲಾ ಹಳದಿಯೇ ಸಿದ್ಧರಾಮಯ್ಯ ಅವರಿಗೂ ಅದೇ ಆಗಿದೆ. ಎಲ್ಲದರಲ್ಲೂ ವಿರೋಧ ಮಾಡೋದು ಸಿದ್ಧರಾಮಯ್ಯ ಕೆಲಸ. ಆರ್ ಎಸ್ ಎಸ್ ಕಚೇರಿ ಮೇಲೆ ತಿರಂಗಾ ಹಾರಲ್ಲ    ಅಂತಾ ಯಾರು ಹೇಳಿದ್ದು..? ಆರ್ ಎಸ್ ಎಸ್ ಕಚೇರಿ ಮೇಲೂ ಕೂಡ ತಿರಂಗ ಹಾರುತ್ತೆ ಎಂದು ಟಾಂಗ್ ನೀಡಿದರು.lockdown-enforce-after-may-24-union-minister-dv-sadananda-gowda

Key words: Former Union Minister- DV Sadanand Gowda -Tong – Siddaramaiah.