ಮುಂದಿನ‌ ವರ್ಷ ಅದ್ದೂರಿ ದಸರಾ- ಮೈಸೂರು ಜನತೆಗೆ ವಿಶೇಷ ಅಭಿನಂದನೆ ಸಲ್ಲಿಸಿದ ಸಿಎಂ ಬಸವರಾಜ ಬೊಮ್ಮಾಯಿ.

kannada t-shirts

ಮೈಸೂರು,ಅಕ್ಟೋಬರ್,16,2021(www.justkannada.in): ಈ‌ ಭಾರಿಯ ದಸರಾ ಅತ್ಯಂತ ಯಶಸ್ವಿಯಾಗಿ ಮುಕ್ತಾಯವಾಗಿದೆ. ಮುಂದಿನ‌ ವರ್ಷ ಅದ್ದೂರಿಯಾಗಿ ದಸರಾ ನಡೆಸುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ನುಡಿದರು.

ನಿನ್ನೆ ಐತಿಹಾಸಿಕ ಜಂಬೂ ಸವಾರಿ ಯಶಸ್ವಿ ಬಳಿಕ ವಿಶ್ವ ವಿಖ್ಯಾತ ಮೈಸೂರು ದಸರಾಗೆ ತೆರೆಬಿದ್ದಿತು. ಮೈಸೂರಿನಲ್ಲಿ ಇಂದು ಮಾತನಾಡಿ ಮೈಸೂರಿನ ಜನತೆಗೆ ವಿಶೇಷ ಅಭಿನಂದನೆ ಸಲ್ಲಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಒಳ್ಳೆಯ‌ ರೀತಿಯಲ್ಲಿ ದಸರಾ ಸಂಧರ್ಭದಲ್ಲಿ ಟೂರಿಸಂ ಸರ್ಕ್ಯೂಟಿ ಮಾಡುತ್ತೇವೆ. ದಸರಾ ವಸ್ತು ಪ್ರದರ್ಶನವನ್ನ 365 ದಿನ ಬಳಕೆ ಮಾಡಲು ಚಿಂತನೆ ನಡೆಸಿದೆ. ಇದಕ್ಕೆ ಎಲ್ಲರ ಜೊತೆ ಕುಳಿತು ಮಾತುಕತೆ ನಡೆಸುತ್ತೇನೆ. ಈ‌ ಭಾರಿಯ ದಸರಾ ಅತ್ಯಂತ ಯಶಸ್ವಿಯಾಗಿ ಮುಕ್ತಾಯವಾಗಿದೆ. ಮುಂದಿನ‌ ವರ್ಷ ಅದ್ದೂರಿಯಾಗಿ ದಸರಾ ನಡೆಸುತ್ತೇವೆ ಎಂದರು.

ನಾಳೆಯಿಂದ ಉಪಚುನಾವಣೆ ಪ್ರಚಾರಕ್ಕೆ ಹೋಗುತ್ತೇನೆ. ನಾಲ್ಕು‌ ದಿನಗಳ‌ ಕಾಲ ಉಪಚುನಾವಣೆ ಪ್ರಚಾರಕ್ಕೆ ಹೋಗುತ್ತೇನೆ. ಎರೆಡು‌ ದಿನ ಹಾನಗಲ್, ಎರೆಡು ದಿನ‌ ಸಿಂದಗಿಯಲ್ಲಿ ಪ್ರಚಾರ ಮಾಡುತ್ತೇನೆ. ಎರೆಡು ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲುತ್ತಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.

Key words: CM Basavaraja Bommai-  special tribute -Mysore people -next year

ENGLISH SUMMARY…

Dasara to be celebrated in a grand way next year: CM Bommai thanks Mysureans
Mysuru, October 16, 2021 (www.justkannada.in): “This year the Dasara Mahotsav has been concluded successfully. Next year we will celebrate it grandly,” opined Chief Minister Basavaraj Bommai.
The historic Jambu Savari, which is the major attraction of the Mysuru Dasara Mahotsav came to a colorful end yesterday. Speaking after the program the Chief Minister Basavaraj Bommai informed that the government is taking all necessary steps for tourism security during the Dasara Mahotsav. He also informed that the government is also contemplating conducting the Dasara Exhibition all 365 days a year. “I will discuss this with the authorities concerned. This year the Dasara Mahotsav has been held successfully. Let us celebrate it grandly next year,” he added.
“I am going for the byelection campaigning tomorrow. I will be engaged in the campaigning work for the next four days. I will be campaigning for two days in Sindhagi and two days in Hanagal. I have complete confidence that the candidates of our party will win in both the constituencies,” Bommai said.
Keywords: Chief Minister Basavaraj Bommai/ Mysuru Dasara Mahotsav/ conclude/ successfully

website developers in mysore