ಅಧಿಕಾರಕ್ಕೆ ಬಂದ ಮೇಲೆ ಸಿಎಂ ಯಾರಾದ್ರೂ ಬೇಜಾರಿಲ್ಲ-ಮಾಜಿ ಸಿಎಂ ಸಿದ್ಧರಾಮಯ್ಯ ನುಡಿ.

ಹುಬ್ಬಳ್ಳಿ,ಅಕ್ಟೋಬರ್,16,2021(www.justkannada.in): ಮುಂದಿನ ಸಿಎಂ ಅಭ್ಯರ್ಥಿ ವಿಚಾರ ಕಾಂಗ್ರೆಸ್ ನಲ್ಲಿ ಬಾರಿ ಸದ್ಧು ಮಾಡುತ್ತಿದ್ದು ಕೆಲ ಮುಖಂಡರು ಸಿದ್ಧರಾಮಯ್ಯ ಮುಂದಿನ ಸಿಎಂ ಎಂದು ಹೇಳಿಕೆ ನೀಡಿ ಕಾಂಗ್ರೆಸ್ ನಲ್ಲೇ ಸಾಕಷ್ಟು ಗೊಂದಲ ಉಂಟಾಗಿತ್ತು. ನಂತರ ಈ ಬಗ್ಗೆ ಹೇಳಿಕೆ ನೀಡದಂತೆ ಕಾಂಗ್ರೆಸ್ ಮುಖಂಡರಿಗೆ ಸೂಚನೆ ನೀಡಲಾಗಿತ್ತು.

ಇದೀಗ ಮುಂದಿನ ಸಿಎಂ ಅಭ್ಯರ್ಥಿ ಕುರಿತು ಹುಬ್ಬಳ್ಳಿಯಲ್ಲಿ ಮಾಧ್ಯಮಗಳ ಜತೆ ಮಾತನಾಡಿರುವ ಸಿದ್ಧರಾಮಯ್ಯ, ಅಧಿಕಾರಕ್ಕೆ ಬಂದ ಮೇಲೆ ಸಿಎಂ ಯಾರಾದ್ರೂ ಬೇಜಾರಿಲ್ಲ.ಮುಸ್ಲೀಂರನ್ನಾದ್ರೂ ಮಾಡಲಿ ದಲಿತರನ್ನಾದ್ರೂ ಮಾಡಲಿ. ಸಿಎಂ ಮಾಡೋದು ಹೈಕಮಾಂಡ್, ಶಾಸಕರಿಗೆ ಬಿಟ್ಟ ವಿಚಾರ ಎಂದು ಹೇಳಿದರು.

Key words: CM – came – power-Former CM -Siddaramaiah