ಮಕ್ಕಳೇ… ಮೊಬೈಲ್ ಗೇಮ್ ಬಿಟ್ಟು ದೇಸಿ ಆಟಗಳನ್ನು ಆಡಿ ಎಂದ ಪ್ರಧಾನಿ: ಕರ್ನಾಟಕದ ರೈತ ಕಾಳೇಗೌಡ ಸಾಧನೆ ಕೊಂಡಾಡಿದ ಮೋದಿ

ನವದೆಹಲಿ, ಜೂನ್ 28, 2020 (www.justkannada.in): ಮಕ್ಕಳು ಮೊಬೈಲ್ ಗಳಲ್ಲಿ‌ಆನ್ ಲೈನ್ ಗೇಮ್ ಗಳನ್ನು ಆಡುವುದನ್ನು ಕಡಿಮೆ ಮಾಡಿ ಮನೆಯಲ್ಲಿ ಹಿರಿಯರು ಕಲಿತಿರುವ ಅಳಗುಳಿ ಮಣೆ ಸೇರಿದಂತೆ ಮನೆಯಾಟಗಳನ್ನು ಕಲಿಯಬೇಕು ಎಂದು ಮೋದಿ ಮನ್ ಕೀ ಬಾತ್ ನಲ್ಲಿ ಸಲಹೆ ನೀಡಿದರು.

ದೇಶದ ಜನ ಇದೀಗ ಸ್ವದೇಶಿ ವಸ್ತುಗಳನ್ನು ಬಳಸುವುದನ್ನು ಉತ್ತೇಜಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಇದರಿಂದ ದೇಶ ಹೊಸ ದಿಕ್ಸೂಚಿಯತ್ತ ಮುನ್ನಡೆಯಲಿದೆ. ಸಕಾರಾತ್ಮಕ ಯೋಚನೆಗಳಿಂದ ಉತ್ತಮ ಜೀವನದತ್ತ ಧೃಡ ಸಂಕಲ್ಪ ಮಾಡಿ ಮುನ್ನಡೆಯಬೇಕಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಹೊಸ ಆಲೋಚನೆಗಳ ಮೂಲಕ ದೇಶವನ್ನು ಮುನ್ನಡೆಸಬೇಕಿದೆ ಎಂದು ಕಿವಿಮಾತು ಹೇಳಿದರು.

ಕೊರೊನಾದಿಂದ ಜನರ ಜೀವನ ಶೈಲಿ ಬದಲಾಗಿದೆ. ಜಗತ್ತಿನ ಬೇರೆ ದೇಶಗಳಿಗೆ ಹೋಲಿಸಿದರೆ ಭಾರತ ಕೊರೊನಾ ಸೋಂಕು ನಿಯಂತ್ರಿಸುವಲ್ಲಿ ಸಫಲವಾಗಿದೆ. ಇದು ಮತ್ತಷ್ಟು ಪರಿಣಾಮಕಾರಿಯಾಗಬೇಕಿದೆ ಎಂದರು.

ಕರ್ನಾಟಕದ ರೈತನ ಕೊಂಡಾಡಿದ ಪ್ರಧಾನಿ

ಕರ್ನಾಟಕದ ರೈತ ಕಾಳೇಗೌಡರ ಸಾಧನೆಯನ್ನು ಕೊಂಡಾಡಿದ ಪ್ರಧಾನಿ ಮೋದಿ. ಜಾನುವಾರುಗಳಿಗಾಗಿ ಸಣ್ಣ ಹೊಂಡಗಳನ್ನು ನಿರ್ಮಿಸಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ. ಮಳೆ ನೀರು‌ ಕೊಯ್ಲು ಮಾಡುವ ಮೂಲಕ ನೀರಿನ ಸದ್ಬಳಕೆ ಮಾಡಿದ್ದಾರೆ. ಇದು ಇತರರಿಗೆ ಮಾದರಿಯಾಗ ಬೇಕಿದೆ.

ಮೋದಿ ಹೇಳಿದ ಪ್ರಮುಖಾಂಶಗಳು…

ದೇಶದಲ್ಲಿ ಉತ್ತಮ ಮುಂಗಾರು ಆರಂಭವಾಗಿದೆ. ಕೆಲವು ಕಡೆ ಮಳೆಯಿಂದ ಅನಾಹುತವಾಗಿದೆ. ಇದರ ಮಧ್ಯೆ ಕೃಷಿ ಕ್ಷೇತ್ರದಲ್ಲಿ ಉತ್ತಮ ಬೆಳವಣಿಗೆ ಯಾಗುತ್ತಿರುವುದು ಸಂತಸದ ವಿಷಯವಾಗಿದೆ.

ನೀರಿನ ಸದುಪಯೋಗ ಮಾಡಿಕೊಂಡು ಕೃಷಿ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿರುವ ಹಲವಾರು ಕೃಷಿಕರು ನಮಗೆ ಆದರ್ಶವಾಗಿದ್ದಾರೆ. ಇದು ಇತರರಿಗೆ ಪ್ರೇರಣೆಯಾಗಬೇಕು.

ದೇಶದ ಜನತೆ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ. ಎಂತಹ ಸಂಕಷ್ಟದ ಪರಿಸ್ಥಿತಿಯನ್ನು ಆತ್ಮವಿಶ್ವಾಸ ದಿಂದ ಎದುರಿಸುವಶಕ್ತಿ ನಮ್ಮ ಲ್ಲಿದೆ ಎಂಬುದನ್ನು ಹಲವಾರು ಬಾರಿ ಸಾಬೀತುಪಡಿಸಿದ್ದೇವೆ.

ರೈತರಿಗೆ ಅಗತ್ಯವಿರುವ ವಿದ್ಯುತ್, ನೀರು ಮೂಲ ಸೌಕರ್ಯ ಒದಗಿಸಲು ಸರ್ಕಾರ ಬದ್ದವಾಗಿದೆ. ಈ ನಿಟ್ಟಿನಲ್ಲಿ ಹಲವು ಯೋಜನೆಗಳು ಜಾರಿಯಾಗಿದೆ. ರೈತರ ಬೆಳೆಗೆ ಉತ್ತಮ ಬೆಲೆ ಒದಗಿಸುವುದು ನಮ್ಮ ಆದ್ಯತೆ.
ಕೃಷಿ ಚಟುವಟಿಕೆಗಳು ಉತ್ತಮವಾಗಿ ನಡೆದಿದೆ. ರೈತರು ಕೃಷಿಯಲ್ಲಿ ತೊಡಗಿದ್ದಾರೆ. ಕೃಷಿ ಕ್ಷೇತ್ರಕ್ಕೆ ಅಗತ್ಯವಿರುವ ಎಲ್ಲ ಕಾರ್ಯಕ್ರಮಗಳನ್ನು ಸರ್ಕಾರ ಜಾರಿಗೊಳಿಸಿದೆ.

ದೇಶದ ಗಡಿ ರಕ್ಷಣೆಗೆ ನಾವು ಬದ್ದರಾಗಿದ್ದೇವೆ. ಲಡಾಕ್ ಅತಿಕ್ರಮಣ ಮಾಡಲು ಬಂದವರಿಗೆ ನಮ್ಮ ಸೈನಿಕರು ತಕ್ಕ ಪಾಠ ಕಲಿಸಿದ್ದಾರೆ. ದೇಶದ ಒಂದಿಂಚು ಭೂಮಿ ಮೇಲೆ ಕಣ್ಣು ಹಾಕಲು ನಾವು ಅವಕಾಶ ನೀಡಲ್ಲ. ಲಡಾಕ್ ನಲ್ಲಿ ನಮ್ಮ ವೀರ ಸೈನಿಕರು ಅಪ್ರತಿಮ ಪರಾಕ್ರಮ ತೋರಿಸಿದ್ದಾರೆ. ನಮ್ಮ ಸೈನಿಕರ ಮನೋಬಲ ಅಪ್ರತಿಮ. ಸೈನಿಕರ ಶೌರ್ಯ ಸಾಹಸವನ್ನು ದೇಶ ಎಂದಿಗೂ ಮರೆಯುವುದಿಲ್ಲ.

ಕೊರೊನಾ ಸಂಕಟದಿಂದ ದೇಶ ಹೊರ ಬರುತ್ತಿದೆ. ಲಾಕ್ಡೌನ್ ನಿಂದ ಹೊರಬಂದು ಹೊಸ ಜೀವನದಕಡೆ ಹೆಜ್ಜೆ ಹಾಕಿದ್ದೇವೆ. ಕೊರೊನಾ ತಡೆಗೆ ಜನತೆ ಸಾಮಾಜಿಕ ಅಂತರ ಕಾಪಾಡುವುದು, ಮಾಸ್ಕ್ ಧರಿಸುವುದು ಕಡ್ಡಾಯವಾಗಿ ಅನುಸರಿಸಬೇಕು. ಇದರಿಂದ ನೀವು ನಿಮ್ಮ ಕುಟುಂಬ ಸುರಕ್ಷಿತ ವಾಗಿರಲಿದೆ.

ಆತ್ಮನಿರ್ಭರ ಭಾರತಕ್ಕೆ ದೇಶ ಸಂಕಲ್ಪ ಮಾಡಿದೆ. ಪರಾವಲಂಬಿಯಾಗದೆ ಸ್ವಾವಲಂಬಿಯಾಗಯವೆಡೆ ದೇಶ ದಿಟ್ಟ ಹೆಜ್ಜೆ ಇಟ್ಟಿದೆ. ನಮ್ಮ ಸಂಕಲ್ಪ ಇಡೀ ವಿಶ್ವಕ್ಕೆ ಭಾರತದ ಶಕ್ತಿ ಪ್ತದರ್ಶನ ಮಾಡಿಕೊಟ್ಟಿದೆ. ನಾವು ನೆರೆ ದೇಶಗಳ ಜತೆ ಶಾಂತಿ ಬಯಸುತ್ತೇವೆ. ಆದರೆ ವಿನಾಕಾರಣ ನಮ್ಮ ತಾಳ್ಮೆ ಪರೀಕ್ಷೆ ಮಾಡುವ ಕೆಲಸ ಮಾಡಿದರೆ ಅದಕ್ಕೆ ಉತ್ತರ ಕೊಡುವ ತಾಖತ್ತು ನಮಗಿದೆ. ಇದನ್ನು ಲಡಾಕ್ ನಲ್ಲಿ ನಮ್ಮ ವೀರ ಸೈನಿಕರು ತೋರಿಸಿದ್ದಾರೆ.