“ಚಿಕ್ಕಬಳ್ಳಾಪುರದಲ್ಲಿ ಜಿಲೆಟಿನ್ ಸ್ಫೋಟ” : ಐವರು ದುರ್ಮರಣ, ಒಬ್ಬರಿಗೆ ಗಂಭೀರ ಗಾಯ

Promotion

ಚಿಕ್ಕಬಳ್ಳಾಪುರ,ಫೆಬ್ರವರಿ,23,2021(www.justkannada.in) : ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರ ಬಳಿಯ ಹಿರೇನಾಗವಲ್ಲಿ‌ ಗ್ರಾಮದ ಅರಣ್ಯ ಪ್ರದೇಶದ ಬಳಿ ಕಲ್ಲು ಗಣಿಗಾರಿಕೆಯಲ್ಲಿ ಜಿಲೆಟಿನ್ ಸ್ಫೋಟ ಆಗಿದ್ದು, ಐವರು ಸಾವನ್ನಪ್ಪಿದ್ದಾರೆ.

jk

ಮಧ್ಯ ರಾತ್ರಿ 1 ಗಂಟೆಯಲ್ಲಿ ಅರಣ್ಯ ಪ್ರದೇಶದ ಬಳಿ ಕಲ್ಲು ಗಣಿಗಾರಿಕೆಯಲ್ಲಿ ಸಂಗ್ರಹಿಸಿಟ್ಟಿದ್ದ ಜಿಲೆಟಿನ್ ಸ್ಫೋಟ ಗೊಂಡಿದೆ. ಘಟನೆಯಲ್ಲಿ ಅಭಿ, ರಾಮು,ಗಂಗಾಧರ್, ಮುರಳಿ, ಉಮಾಕಾಂತ್ ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಒಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೃತರಾದ ಐವರೂ ಸ್ಥಳೀಯ ಕಲ್ಲು ಕ್ವಾರಿಯ ಕಾರ್ಮಿಕ

ಮೃತರಾದ ಐವರೂ ಸ್ಥಳೀಯ ಕಲ್ಲು ಕ್ವಾರಿಯ ಕಾರ್ಮಿಕರೆಂದು ತಿಳಿದು ಬಂದಿದ್ದು, ಈ ಪೈಕಿ ನಾಲ್ವರು ಆಂಧ್ರ ಮೂಲದವರಾಗಿದ್ದರೆ, ಒಬ್ಬರು ಹಿರೇನಾಗವಲ್ಲಿ ಗ್ರಾಮದವರಾಗಿದ್ದಾರೆ. ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

Chikkaballapur-Gelatin-Explosion-6 deaths

ಸ್ಥಳಕ್ಕೆ ಕೇಂದ್ರ ವಲಯದ ಐಜಿಪಿ ಚಂದ್ರಶೇಖರ್, ಜಿಲ್ಲಾಧಿಕಾರಿ ಆರ್.ಲತಾ, ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಸ್ಥಳದಲ್ಲೇ ಮೊಕ್ಕಾಂ ಹೂಡಿ ದುರಂತಕ್ಕೆ ಸಂಬಂಧಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

key words : Chikkaballapur-Gelatin-explosion-Five-Dilatation-Serious-injury- one