ನೀವು ಪ್ರಾಣ ಕೊಡಬೇಕಿರೋದು ಅನರ್ಹ ಶಾಸಕರಿಗಲ್ಲ, ಸಂತ್ರಸ್ತರಿಗೆ-ಸಿಎಂ ಬಿಎಸ್ ವೈಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಟಾಂಗ್…..

Promotion

ಚಿಕ್ಕಬಳ್ಳಾಪುರ,ನ26,2019(www.justkannada.in):  ಸಿಎಂ ಬಿಎಸ್ ಯಡಿಯೂರಪ್ಪ ಅವರು ಅನರ್ಹರಿಗೆ ಪ್ರಾಣ ಬೇಕಾದ್ರೂ ಕೊಡ್ತೀನಿ ಅಂತಾರೆ. ಆದರೆ ಸಿಎಂ ಬಿಎಸ್ ವೈ ಪ್ರಾಣ ಕೊಡಬೇಕಿರೋದು ಅನರ್ಹ ಶಾಸಕರಿಗಲ್ಲ. ಬದಲಾಗಿ ಸಂತ್ರಸ್ತರಿಗೆ. ಇಂತಹ ಸಿಎಂ ಹೊಂದಿರೋದು ನಮ್ಮ ದುರ್ದೈವ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಟಾಂಗ್ ನೀಡಿದರು.

ಚಿಕ್ಕಬಳ್ಳಾಪುರ ಉಪಚುನಾವಣೆ ಹಿನ್ನೆಲೆ ಇಂದು ಜೆಡಿಎಸ್ ಅಭ್ಯರ್ಥಿ ಪರ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಪ್ರಚಾರ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಸೋನಿಯಾ ಗಾಂಧಿ ಅವರು ಒತ್ತಾಯ ಮಾಡಿ ನನ್ನನ್ನ ಸಿಎಂ ಮಾಡಿದ್ರು. ಆದರೆ ನಾನು ಸಂತೋಷದಿಂದ ಆಡಳಿತ ನಡೆಸಲಿಲ್ಲ. ನನ್ನನ್ನ ಅಧಿಕಾರದಿಂದ ಕೆಳಗಿಳಿಸಲು ಹುನ್ನಾರ ನಡೆದಿತ್ತು. ನನಗೆ ಹಣ ಮಾಡುವ ಹುಚ್ಚಿಲ್ಲ. ನಿಮ್ಮ ಪ್ರೀತಿಯೇ ನನಗೆ ಆಸ್ತಿ ಎಂದರು.

ಅಕ್ರಮ ಹಣದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಶಾಸಕರನ್ನ ಖರೀದಿ ಮಾಡಿದ್ದಾರೆ. ಕುರಿಗಳಂತೆ ಖರೀದಿ ಮಾಡಿದ್ದಾರೆ. ಬಿ.ಎಸ್ ಯಡಿಯೂರಪ್ಪ ಯಾರಿಗೆ ಮುಖ್ಯಮಂತ್ರಿಯಾಗಿದ್ದಾರೆ. ಕೇವಲ ಶಿಕಾರಿಪುರಕ್ಕೆ ಮಾತ್ರ ಕೆಲಸ ಮಾಡಿದ್ದಾರೆ. ಶಿಕಾರಿಪುರ ಶಿವಮೊಗ್ಗಕ್ಕೆ ಮಾತ್ರ ಅನುದಾನ ಬಿಡುಗಡೆ ಮಾಡಿದ್ದಾರೆ ಎಂದು ಹೆಚ್.ಡಿ ಕುಮಾರಸ್ವಾಮಿ ಆರೋಪಿಸಿದರು.

Key words: chikkaballapur-former cm- hd kumaraswamy-tong-cm bs yeddyurappa