ಚಾಮರಾಜನಗರ ಆಕ್ಸಿಜನ್ ದುರಂತ: ನ್ಯಾಯಾಂಗ ತನಿಖೆಗೆ ರಾಜ್ಯ ಸರ್ಕಾರ ಆದೇಶ…

kannada t-shirts

ಬೆಂಗಳೂರು, ಮೇ,5,2021(www.justkannada.in): ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದಾಗಿ 24 ರೋಗಿಗಳು ಸಾವನ್ನಪ್ಪಿದ ಪ್ರಕರಣವನ್ನು ರಾಜ್ಯ ಸರ್ಕಾರ ನ್ಯಾಯಾಂಗ ತನಿಖೆಗೆ ಆದೇಶಿಸಿದೆ.jk

ನಿವೃತ್ತ ನ್ಯಾ. ಬಿ.ಎ ಪಾಟೀಲ್ ಅವರ ನೇತೃತ್ವದಲ್ಲಿ ತನಿಖೆ ನಡೆಯಲಿದ್ದು 1 ತಿಂಗಳಲ್ಲಿ ವರದಿ ನೀಡಲಿದ್ದಾರೆ. ಏಕಸದಸ್ಯ ತನಿಖಾ ಆಯೋಗ ಕಾರ್ಯನಿರ್ವಹಣೆ ಮಾಡಲಿದೆ. ಇನ್ನು ಆಕ್ಸಿಜನ್ ಸಾಗಾಟಕ್ಕೆ ಸಂಬಂಧಿಸಿದ ಚಾಮರಾಜನಗರ ಜಿಲ್ಲಾಸ್ಪತ್ರೆಯ ದಾಖಲೆ, ಜಿಲ್ಲಾಧಿಕಾರಿ ಕಚೇರಿಯ ದಾಖಲೆ ಹಾಗೆಯೇ ಮೈಸೂರು ಡಿಸಿ ಕಚೇರಿಯ ದಾಖಲೆಗಳನ್ನು ಸೀಜ್ ಮಾಡಲು ಹೈಕೋರ್ಟ್ ವಿಭಾಗೀಯ ಪೀಠ  ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದೆ.

ಸೀಜ್ ಆದ ದಾಖಲೆಗಳನ್ನ ವಿಚಾರಣಾಧಿಕಾರಿ ಪರಿಶೀಲಿಸಬಹುದು ಎಂದು ಹೈಕೋರ್ಟ್ ವಿಭಾಗೀಯ ಪೀಠ ತಿಳಿಸಿದೆ. ಚಾಮರಾಜನಗರ ಜಿಲ್ಲಾಸ್ಪತ್ರೆ ಆಕ್ಸಿಜನ್ ದುರಂತ ಪ್ರಕರಣ ನ್ಯಾಯಾಂಗ ತನಿಖೆ ಅಗತ್ಯ. ಈ ಬಗ್ಗೆ  ತಮ್ಮ ನಿಲುವು ತಿಳಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿತ್ತು.

ENGLISH SUMMARY…

Chamarajanagara oxygen shortage disaster: State Govt. orders judicial investigation
Bengaluru, May 5, 2021 (www.justkannada.in): The State Government has ordered a judicial inquiry into the incident where 24 people had to lose their lives at the Chamarajanagara District Hospital after running out of oxygen.
The investigation will be conducted under the leadership of Retired Justice B.A. Patel and will submit the report within 1 month. It will be a one-member investigation team. the Hon’ble High Court Division Bench has directed the Chief Secretary to the Government to seize the documents at the office of the DC, Mysuru District as well as the related documents of the Chamarajanagara District Hospital regarding the transportation of Oxygen. The Hon’ble High Court Divisional Bench has also informed that the investigation officer can verify the seized documents. The Hon’ble High Court of Karnataka had expressed its opinion that a judicial inquiry is required into the Chamarajanagara incident and had asked the Govt. of Karnataka to inform about its opinion.chamarajanagar-oxygen-death-case-state-government-orders-judicial-inquiry
Keywords: Hon’ble High Court of Karantaka/ Judicial Enquiry/ Chamarajanagara Oxygen incident/ Chamarajanagara District Hospital

Key words: Chamarajanagar -Oxygen –death-case-State government- orders -judicial inquiry.

website developers in mysore