ಲಾಕ್ ಡೌನ್ ಸಮಯ ಕಳೆಯುವುದು ಹೇಗೆ? ಇದೋ ಇಲ್ಲಿದೆ ಡಾರ್ಲಿಂಗ್ ಕೃಷ್ಣ-ಮಿಲನಾ ಟಿಪ್ಸ್!

ಬೆಂಗಳೂರು, ಮೇ 05, 2021 (www.justkannada.in): ಲಾಕ್ ಡೌನ್ ಸಮಯವನ್ನು ಕಳೆಯುವುದು ಹೇಗೆ ಎಂಬ ಬಗ್ಗೆ ನಟ ಡಾರ್ಲಿಂಗ್ ಕೃಷ್ಣ ಮತ್ತು ಅವರ ಪತ್ನಿ, ನಟಿ ಮಿಲನಾ ನಾಗರಾಜ್ ಟಿಪ್ಸ್ ನೀಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಕುಟುಂಬದ ಜೊತೆಗೆ ಕಳೆಯುತ್ತಿರುವ ಖುಷಿಯ ಕ್ಷಣವೊಂದನ್ನು ಈ ಇಬ್ಬರೂ ಶೇರ್ ಮಾಡಿದ್ದಾರೆ. ಈ ವಿಡಿಯೋ ಅಭಿಮಾನಿಗಳ ಮೊಗದಲ್ಲಿ ನಗುವನ್ನೂ ತರಿಸಿದೆ.

ಲಾಕ್ ಡೌನ್ ವೇಳೆ ತಮ್ಮ ತವರೂರಿನಲ್ಲಿರುವ ಕೃಷ್ಣ ದಂಪತಿ ತಮ್ಮ 10 ವರ್ಷದ ಅಳಿಯನ ಜೊತೆ ಮನೆಯೊಳಗೆ ಕ್ರಿಕೆಟ್ ಆಡುತ್ತಿದ್ದಾರೆ! ಈ ವೀಡಿಯೋ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಲಾಕ್ ಡೌನ್ ವೇಳೆ ಯಾರೂ ಮನೆಯಿಂದ ಹೊರಹೋಗುವಂತಿಲ್ಲ. ಹೀಗಾಗಿ ಕುಟುಂಬದ ಜೊತೆ ಕಾಲ ಕಳೆಯುತ್ತಿದ್ದಾರೆ.