ಕೊರೊನಾ ಸೋಂಕಿತರ ಸಂಕಷ್ಟಕ್ಕೆ ಧಾವಿಸಿದ ಕಿಚ್ಚ

ಬೆಂಗಳೂರು, ಮೇ 05, 2021 (www.justkannada.in): ನಟಸುದೀಪ್ ಕೊರೊನಾಸೋಂಕಿತರ ಸಂಕಷ್ಟ ಕಾಲದಲ್ಲಿ ಅವರಸಹಾಯಕ್ಕೆಆಗಮಿಸಿದ್ದಾರೆ.

ಬೆಂಗಳೂರಿನ ಆಸ್ಪತ್ರೆಗಳಿಗೆ 300 ಆಕ್ಸಿಜನ್​ ಸಿಲಿಂಡರ್​ಗಳನ್ನು ಪೂರೈಕೆ ಮಾಡಲು ಮುಂದಾಗಿದ್ದಾರೆ ಕಿಚ್ಚ ಸುದೀಪ್.

ಕೊರೊನಾ ಸಂಕಷ್ಟದ ಸಮಯದಲ್ಲಿ ಕೊರೊನಾ ಸೋಂಕಿತರಿಗೆ ನೆರವಾಗುವ ನಿಟ್ಟಿನಲ್ಲಿ ಸೇವಾ ಕಾರ್ಯ ಮಾಡಿ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.

ಸಂಕಷ್ಟದಲ್ಲಿರುವ ಜನರಿಗೆ ಸಹಾಯದ ಹಸ್ತ ಚಾಚುವ ಮೂಲಕ ರಿಯಲ್ ಲೈಫ್ ನಲ್ಲೂ ನಾಯಕರಾಗಿದ್ದಾರೆ.