ನೆರೆ ಅಧ್ಯಯನಕ್ಕಾಗಿ ಕೊಡಗು ಜಿಲ್ಲೆಗೆ ಕೇಂದ್ರ ತಂಡ ಭೇಟಿ….

ಕೊಡಗು,ಆ,27,2019(www.justkannada.in):  ಭಾರಿ ಮಳೆ ಪ್ರವಾಹದಿಂದ ನಲುಗಿರುವ ಕೊಡಗು ಜಿಲ್ಲೆಗೆ ನೆರೆ ಅಧ್ಯಯನಕ್ಕಾಗಿ ಕೇಂದ್ರದ 6 ಅಧಿಕಾರಿಗಳ ತಂಡ ಭೇಟಿ ನೀಡಿದೆ.

ಎರಡು ಪ್ರತ್ಯೇಕ ಕಾಪ್ಟರ್ ಗಳ‌ ಮೂಲಕ ಆಗಮಿಸಿದ್ದು ಸೋಮವಾರಪೇಟೆ ತಾಲ್ಲೂಕಿನ ಕೂಡಿಗೆ ಸೈನಿಕ ಶಾಲೆಯ ಹೆಲಿಪ್ಯಾಡ್ ಗೆ ಅಧಿಕಾರಿಗಳ ತಂಡ ಬಂದಿಳಿದೆ. ಕೇಂದ್ರ ಆರ್ಥಿಕ ಇಲಾಖೆ ನಿರ್ದೇಶಕಿ ಎಸ್ ಸಿ ಮೀನಾ ನೇತೃತ್ವದ ತಂಡ ಸೈನಿಕ ಶಾಲೆಯಲ್ಲಿ ಕೊಡಗು ಪ್ರವಾಹ ಬಗ್ಗೆ ಜಿಲ್ಲಾಧಿಕಾರಿಯಿಂದ ಮಾಹಿತಿ ಪಡೆದುಕೊಂಡಿದೆ.

ಸದ್ಯ ವಸ್ತು ಸ್ಥಿತಿ ಅರಿಯಲು ಪ್ರವಾಹ ಸ್ಥಳಗಳಿಗೆ ತಂಡ ಭೇಟಿ  ನೀಡಲಿದ್ದು  ಅಧಿಕಾರಿಗಳ ತಂಡಕ್ಕೆ ಕೊಡಗು ಡಿಸಿ, ಎಸ್ಪಿ, ಸಿಇಓ, ಎಸಿ ಸಾಥ್ ನೀಡಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳಾದ ಕರಡಿಗೋಡು ,ಕುಂಬಾರಗುಂಡಿ ,ನೆಲ್ಲಿಹುದಿಕೇರಿ, ಕೊಂಡಂಗೇರಿ  ಸೇರಿದಂತೆ ಹಲವು ಗ್ರಾಮಗಳಿಗೆ  ಈ ಕೇಂದ್ರ ತಂಡ ತೆರಳಲಿದೆ.

ತಂಡದಲ್ಲಿ ಕೃಷಿ ಸಹಕಾರ ಮತ್ತು ರೈತ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಪುನ್ನುಸ್ವಾಮಿ, ಬೆಂಗಳೂರಿನ ಕೇಂದ್ರ ಸರ್ಕಾರದ ಜಲಮೂಲ ಪ್ರಾದೇಶಿಕ ಕಚೇರಿಯ ಎಸ್.ಇ., ಜಿತೇಂದ್ರ ಪಣ್ವಾರ್, ರಸ್ತೆ ಮತ್ತು ಸಾರಿಗೆ ಮತ್ತು ಹೆದ್ದಾರಿ ವಿಭಾಗದ ವಿಜಯ ಕುಮಾರ್, ಗ್ರಾಮೀಣಾಭಿವೃದ್ಧಿ ಸಚಿವಾಲಯದ ಮಾಣಿಕ್ ಚಂದ್ರ ಪಂಡಿತ್, ಇಂಧನ ಇಲಾಖೆಯ ಒ.ಪಿ.ಸುಮನ್ ಅವರು ಇದ್ದು ಸಮೀಕ್ಷೆ ನಡೆಸಲಿದ್ದಾರೆ.

ಕೊಡಗು  ಜಿಲ್ಲೆಯಲ್ಲಿ ಆಗಸ್ಟ್ ಮೊದಲ ವಾರದಲ್ಲಿ ಸುರಿದ ಧಾರಾಕಾರ ಮಳೆಗೆ ಜಿಲ್ಲೆಯ ಹಲವು ಕಡೆಗಳಲ್ಲಿ ಜಲಾವೃತ ಹಾಗೂ ಭೂ ಕುಸಿತದಿಂದಾಗಿ ಮಾನವ, ಜಾನುವಾರು ಜೀವ ಹಾನಿ, ಮನೆ, ರಸ್ತೆ, ಬೆಳೆ ಹೀಗೆ ಹಲವು ರೀತಿಯಲ್ಲಿ ನಷ್ಟ ಉಂಟಾಗಿದ್ದು, ಈ ಸಂಬಂಧ ಕೇಂದ್ರ ಸರ್ಕಾರದ ಅಧ್ಯಯನ ತಂಡದ ಅಧಿಕಾರಿಗಳು ಇಂದು ಜಿಲ್ಲೆಗೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

Key words: Central team -visits -Kodagu district -study – neighbors.