ಮತ್ತೊಮ್ಮೆ ವೈಜ್ಞಾನಿಕವಾಗಿ ಜಾತಿ ಗಣತಿ ಮಾಡಲಿ-ಶಾಮನೂರು ಶಿವಶಂಕರಪ್ಪ ಆಗ್ರಹ.

Promotion

ಬೆಂಗಳೂರು,ನವೆಂಬರ್,9,2023(www.justkannada.in): ಜಾತಿ ಗಣತಿ ವರದಿಗೆ ವೀರಶೈವ ಮಹಾಸಭಾದ ಅಧ್ಯಕ್ಷ  ಶಾಮನೂರು ಶಿವಶಂಕರಪ್ಪ ವಿರೋಧ ವ್ಯಕ್ತಪಡಿಸಿದ್ದು, ಮತ್ತೊಮ್ಮೆ ವೈಜ್ಞಾನಿಕವಾಗಿ ಜಾತಿಗಣತಿ ಮಾಡಲಿ ಎಂದು ಆಗ್ರಹಿಸಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಶಾಮನೂರು ಶಿವಶಂಕರಪ್ಪ,   ಜಾತಿಗಣತಿಯ ಅಂಕಿ ಅಂಶಗಳಲ್ಲಿ ಸಾಕಷ್ಟು ಲೋಪದೋಷಗಳಿವೆ. ಹೀಗಾಗಿ ಮತ್ತೊಮ್ಮೆ ವೈಜ್ಞಾನಿಕವಾಗಿ ಜಾತಿ ಗಣತಿ ಮಾಡಬೇಕು. ಜಾತಿ ಗಣತಿ ಸಮೀಕ್ಷೆಯೇ ಸಮರ್ಪಕವಾಗಿ ನಡೆದಿಲ್ಲ. ಹಲವರ ಮನೆಗೆ ಭೇಟಿ ನೀಡದೆ ಸಿದ್ದಪಡಿಸಲಾಗಿದೆ.  ನಮ್ಮ ಸಮುದಾಯದ ಮನೆಗಳಿಗೆ ಹೋಗಿ ಯಾವುದೇ ಸರ್ವೆ ಮಾಡಿಲ್ಲ. ವೀರಶೈವ ಲಿಂಗಾಯತರ ಸಂಖ್ಯೆಯನ್ನ ಕಡಿಮೆ ತೋರಿಸಲಾಗಿದೆ. ಇದರಿಂದ ಸಮುದಾಯಕ್ಕೆ ತುಂಬಾ ನಷ್ಟವಾಗಲಿದೆ  ಎಂದರು.

ನಾವು ಜಾತಿ ಗಣತಿ ವಿರೋಧಿ ಅಲ್ಲ ಆದ್ರೆ. ಜಾತಿಗಣತಿ ವೈಜ್ಞಾನಿಕವಾಗಿರಲಿ ಈ ಜಾತಿ ಗಣತಿ ಈಗಾಗಲೇ 8 ವರ್ಷದ ಹಳೆಯದಾಗಿದೆ.   ವರದಿಯಲ್ಲಿ ಹಲವು ನ್ಯೂನ್ಯತೆಗಳಿವೆ.  ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಜಾತಿಗಣತಿ ಮಾಡಬೇಕು ಎಂದರು.

Key words: caste census –report-scientifically- again – Shamanur Shivshankarappa