ಆರ್.ಡಿ.ಪಾಟೀಲ್ ರಕ್ಷಣೆಗೆ ಪ್ರಿಯಾಂಕ್ ಖರ್ಗೆ ನಿಂತಿದ್ದಾರೆ- ಮಾಜಿ ಸಚಿವ ಅರಗ ಜ್ಞಾನೇಂದ್ರ ಆರೋಪ.

ಬೆಂಗಳೂರು,ನವೆಂಬರ್,9,2023(www.justkannada.in): ಕೆಇಎ ನಡೆಸಿದ ಎಫ್​ಡಿಎ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣದಲ್ಲಿ ಭಾಗಿಯಾಗಿ ಆರ್ ​ಡಿ ಪಾಟೀಲ್ ತಲೆಮರಿಸಿಕೊಂಡಿದ್ದು ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಗೃಹಸಚಿವ ಅರಗಜ್ಞಾನೇಂದ್ರ, ಆರ್.ಡಿ.ಪಾಟೀಲ್ ರಕ್ಷಣೆಗೆ ಸಚಿವ ಪ್ರಿಯಾಂಕ್ ಖರ್ಗೆ ನಿಂತಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಶಾಸಕ ಆರಗ ಜ್ಞಾನೇಂದ್ರ, ಎಲ್ಲಾ ಪರೀಕ್ಷೆಗಳಲ್ಲೂ ಆರ್​.ಡಿ.ಪಾಟೀಲ್​ ಅಕ್ರಮ ಮಾಡಿದ್ದಾನೆ. ನಮ್ಮ ಸರ್ಕಾರ ಇದ್ದಾಗ ಹೆಡೆಮುರಿ ಕಟ್ಟಿ ಬಂಧಿಸಿದ್ದವು. ಬಳಿಕ ಜಾಮೀನಿನ ಮೇಲೆ ಆರ್​.ಡಿ.ಪಾಟೀಲ್ ಹೊರ ಬಂದಿದ್ದ. ಈಗ ಆರ್.ಡಿ ಪಾಟೀಲ್​ ತಪ್ಪಿಸಿಕೊಂಡು ಹೋಗಲು ಬಿಟ್ಟಿದ್ಯಾರು? ಪೊಲೀಸರ ಕೈವಾಡವಿಲ್ಲದೆ ಆತ ತಪ್ಪಿಸಿಕೊಂಡು ಹೋಗಲು ಆಗಲ್ಲ.

ಆರ್.ಡಿ.ಪಾಟೀಲ್ ರಕ್ಷಣೆಗೆ ಪ್ರಿಯಾಂಕ್ ಖರ್ಗೆ ನಿಂತಿದ್ದಾರೆ. ಪರೀಕ್ಷಾ ಕೇಂದ್ರ  ಆಯ್ಕೆ​ ಮಾಡುವುದು ಸಹ ಆರ್​.ಡಿ.ಪಾಟೀಲ್​​. ಇಂತಹ ವ್ಯಕ್ತಿಗಳಿಗೆ ರಕ್ಷಣೆ ಕೊಡುವುದು ಕಾಂಗ್ರೆಸ್ ಸರ್ಕಾರದವರು. ಪೊಲೀಸರ ವಿರುದ್ಧವೂ ತನಿಖೆ ಮಾಡಲಿ  ಎಂದು ಅರಗ ಜ್ಞಾನೇಂದ್ರ ಆಗ್ರಹಿಸಿದರು.

Key words: Priyank Kharge – standing up – RD Patil – former Minister Araga jnanendra