ನಿನ್ನೆ ಕೇಂದ್ರ ಸರಕಾರ ಮಂಡಿಸಿದ್ದು ‘ ಪಾಪರ್ ಚೀಟಿ’ ಬಜೆಟ್ : ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್

budget-congress-critic-mysore

Promotion

 

ಮೈಸೂರು, ಫೆ.02, 2022 : (www.justkannada.in news) : ಕೇಂದ್ರ ಸರಕಾರದ ಬಜೆಟ್ ನಲ್ಲಿ ಕರ್ನಾಟಕವನ್ನು ಸಂಪೂರ್ಣ ಕಡೆಗಣಿಸಲಾಗಿದೆ. ಕೇವಲ ಒಂದಿಬ್ಬರು ಶ್ರೀಮಂತ ಉದ್ಯಮಿಗಳನ್ನು ಗಮನದಲ್ಲಿಟ್ಟಿಕೊಂಡು ಬಜೆಟ್ ರೂಪಿಸಲಾಗಿದೆ. ಒಟ್ಟಾರೆ ಇದು ಪಾಪರ್ ಚೀಟಿ ಬಜೆಟ್.

ವಿತ್ತ ಸಚಿವೆ ನಿರ್ಮಲ ಸೀತಾರಮನ್ ಮಂಗಳವಾರ ಮಂಡಿಸಿದ ಕೇಂದ್ರ ಬಜೆಟ್ ಹಿನ್ನೆಲೆಯಲ್ಲಿ ಇಂದು ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಹೇಳಿದಿಷ್ಟು..

ಕೇಂದ್ರ ಬಜೆಟ್ 38.5 ಲಕ್ಷ ಕೋಟಿ ರೂ. ಬಜೆಟ್ ಮಂಡಿಸಿದ್ದಾರೆ. ಪೇಪರ್ ಲೆಸ್ ಬಜೆಟ್ ಒಂದು ಕಡೆಯಾದ್ರೆ, ಇದು ಪಾಪರ್ ಚೀಟಿ ಬಜೆಟ್. ರಾಜ್ಯಕ್ಕೆ ಏನು ಕೊಟ್ಟಿದ್ದಾರೆ ಬಿಜೆಪಿ ನಾಯಕರು ಹೇಳಲಿ.

ಕರ್ನಾಟಕಕ್ಕೆ ಹಿಡಿ ಮಣ್ಣು ಕೊಟ್ಟಿದ್ದಾರೆ. ಕರ್ನಾಟಕ ಸಂಪೂರ್ಣ ನಿರ್ಲಕ್ಷ್ಯ ಮಾಡಿದ್ದಾರೆ. ಇಡೀ ದೇಶವನ್ನು ಖಾಸಗೀಕರಣ ಮಾಡುವ ಹುನ್ನಾರ ಇದೆ. ಅಂಬಾನಿ ಅಥವಾ ಆದಾನಿ ಮಾತ್ರ ಈ ದೇಶವನ್ನು ಲೀಡ್ ಮಾಡುವ ಹಂತಕ್ಕೆ ತೆಗೆದುಕೊಂಡು ಹೋಗುವ ಬಜೆಟ್ ಇದು.
ಸ್ಟಾರ್ಟ್ ಅಪ್ ಅಂದ್ರೆ ಏನು ಅಂತ ಜನರಿಗೆ ಗೊತ್ತಿಲ್ಲ. ಸ್ಟಾರ್ಟ್ ಅಪ್ ಗೆ ತೆರಿಗೆ ವಿನಾಯಿತಿ ಕೊಡೋದಾಗಿ ಹೇಳಿದ್ದಾರೆ. ಸ್ಟಾರ್ಟ್ ಅಪ್ ಮಾಡಲು ಹಣ ಕೊಡುವವರು ಯಾರು ? ಬ್ಯಾಂಕ್ ಗಳು ಸಾಲವನ್ನೇ ಕೊಡುತ್ತಿಲ್ಲ. ಸಾರ್ಟ್ ಅಪ್ ಎಲ್ಲಿಂದ ?

ನಿರುದ್ಯೋಗದ ಸಂಖ್ಯೆ ಕಳೆದ ಮೂರು ವರ್ಷದಿಂದ ಹೆಚ್ಚಳ ಆಗಿದೆ. ಇದು ಜನ ಸಾಮಾನ್ಯರಿಗೆ ಅನುಕೂಲಕರ ಬಜೆಟ್ ಅಲ್ಲ. ರೈತರಿಗೆ, ಬಡವರಿಗೆ ಚಿಪ್ ನೀಡಿದ್ದಾರೆ. ರೈತರನ್ನೂ ಕೂಡ ಖಾಸಗೀಕರಣ ಮಾಡುತ್ತಿದ್ದಾರೆ.

ವಂದೇ ಭಾರತ್ ರೈಲು ಘೋಷಣೆ ಮಾಡಿದ್ದಾರೆ. ವಂದೇ ಭಾರತ್ ರೈಲ್ವೆ ಇಲಾಖೆಯದ್ದಲ್ಲ, ಖಾಸಗಿ ರೈಲು. ರೈಲಿನಲ್ಲಿ ಶೌಚಾಲಯ ಉಪಯೋಗಿಸೋದಕ್ಕೂ ಹಣ ನೀಡಬೇಕಾದ ಪರಿಸ್ಥಿತಿ ತರುತ್ತಾರೆ.

ನದಿ ಜೋಡಣೆ ಮಾಡುತ್ತಾರೆ ಅಂತಾರೆ. ಮೇಕೆದಾಟು ಯೋಜನೆಗೆ ಅನುಮತಿ ನೀಡುತ್ತಿಲ್ಲ. ಇನ್ನು ನದಿ ಜೋಡಣೆ ಯಾವಾಗ ಮಾಡ್ತೀರಾ..?

ದೇಶದಲ್ಲಿ ಕಳೆದ ಎರಡು ವರ್ಷದಲ್ಲಿ 4,386 ಕಂಪನಿಗಳು, 836 ಕರ್ನಾಟಕದಲ್ಲಿ ಮುಚ್ಚಿಹೋಗಿವೆ. ದೇಶದಲ್ಲಿ ಶ್ರೀಮಂತರ ಸಂಖ್ಯೆಗಿಂತ ಬಡವರ ಸಂಖ್ಯೆ ಹೆಚ್ಚಾಗಿದೆ. ಬಿಜೆಪಿ ಪಕ್ಷದ ಆಸ್ತಿ ಹೆಚ್ಚಳ ಮಾಡಿಕೊಂಡಿರುವುದು ಇವರ ಸಾಧನೆ.

ಸಂಸದ ಪ್ರತಾಪ್ ಸಿಂಹ ಗೆ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಪ್ರಶ್ನೆ.

KPCC spokesperson M.Laxman-CM bs yeddyurappa- resigns

ಮಿಸ್ಟರ್ ಪ್ರತಾಪ ಸಿಂಹ ಎಲ್ಲಿ ಹೋಗಿದ್ದೀರಾ..? ಮೈಸೂರಿಗೆ ಬಜೆಟ್ ನಲ್ಲಿ ಏನು ತಂದಿದ್ದೀರಿ ಹೇಳಿ. ಕರ್ನಾಟಕಕ್ಕೆ ಏನು ತಂದಿಲ್ವಲ್ಲ ಮಿಸ್ಟರ್ ಪ್ರತಾಪ್ ಸಿಂಹ.

ಮೈಸೂರು ಕುಶಾಲನಗರ ರೈಲು ತರುತ್ತೇವೆ ಅಂದ್ರಲ್ಲ ಏನಾಯ್ತು ಹೇಳಿ. ಮೈಸೂರು ವಿಮಾನ ನಿಲ್ದಾಣ ರನ್ ವೇ ವಿಸ್ತರಣೆ ಮಾಡಲೇ ಇಲ್ಲವಲ್ಲ‌. ಇಡಿ ಇತಿಹಾಸದಲ್ಲೆ ಪ್ರತಾಪ್ ಸಿಂಹ ರಂತರ ಸುಳ್ಳು ಹೇಳುವ ವ್ಯಕ್ತಿ ಎಂದೂ ನೋಡೆ ಇಲ್ಲ.
ನಿಮ್ಮ ಕೇಂದ್ರ ಬಜೆಟ್ ಶ್ರೀಮಂತರಿಗೆ ಅನುಕೂಲ ಆಗುವ ಬಜೆಟ್‌‌. ಶ್ರೀ ಸಾಮಾನ್ಯನ ಅನುಕೂಲಕರ ಬಜೆಟ್ ಅಲ್ಲ. ಸುದ್ದಿಗೋಷ್ಠಿಯಲ್ಲಿ ಎಂ ಲಕ್ಷಣ್ ಹೇಳಿಕೆ.

key words : budget-congress-critic-mysore