ಕುಲಕಸುಬುಗಳ ರಕ್ಷಣೆ, ಸಾಮಾಜಿಕ ನ್ಯಾಯದ ಆದ್ಯತೆಯೇ ಬಿ.ಎಸ್.ವೈ ಧ್ಯೇಯ: ರಘು ಕೌಟಿಲ್ಯ

ಮೈಸೂರು,ಅಕ್ಟೋಬರ್,24,2020: ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಸ್ವಾವಲಂಬಿ ಭಾರತ ನಿರ್ಮಾಣದಲ್ಲಿ ಕುಲಕಸುಬು ಅಧಾರಿತ ಸಮಾಜಗಳು ಮಹತ್ವದ ಪಾತ್ರ ನಿರ್ವಹಿಸಬೇಕಾಗಿದ್ದು ವಿಪರ್ಯಾಸದ ಸಂತಿಯಂದರೆ ಆಧುನಿಕ ತಂತ್ರಜ್ಞಾನಕ್ಕೆ ಸಿಲುಕಿರುವ ಕುಲಕಸುಬುಗಳು ಅತಂತ್ರಸ್ಥಿತಿಯಲ್ಲಿ ನಲುಗುತ್ತಿವೆ. ಈ ನಿಟ್ಟಿನಲ್ಲಿ ಕುಲಕಸುಬುಗಳಿಗೆ ಆಧುನಿಕತೆಯ ತಂತ್ರಜ್ಞಾನದ ಸ್ಪರ್ಷನೀಡಿ ಅದನ್ನು ಉಳಿಸುವುದರ ಜೊತೆಗೇ ಕುಲಕಸುಬು ಆಧಾರಿತ ಕಾಯಕ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸುವುದು ಮುಖ್ಯಮಂತ್ರಿ ಶ್ರೀ ಬಿ.ಎಸ್ ಯಡಿಯೂರಪ್ಪನವರ ಆದ್ಯತೆಯಾಗಿದೆ ಎಂದು ಬಿಜೆಪಿ ಮುಖಂಡರು ಹಾಗೂ ಕಾಯಕ ಸಮುದಾಯಗಳ ಸಂಘಟಕರಾದ ರಘು ಕೌಟಿಲ್ಯರವರು ಹೇಳಿದರು.

ಶಿರಾ ಉಪಚುನಾವಣಾಯಲ್ಲಿ ಬಿಜೆಪಿ ಅಭ್ಯರ್ಥಿ ಡಾ ರಾಜೇಶ್ ಗೌಡರ ಪರ ಮತಯಾಚನೆ ಸಂದರ್ಭದಲ್ಲಿ ಕರೆಕ್ಯಾತನಹಳ್ಳಿಯಲ್ಲಿ ಮಡಿವಾಳ ಸಮಾಜದ ಸಭೆಯಲ್ಲಿ ಮಾತನಾಡುತಿದ್ದರು. ಶಿರಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಯಕ ಸಮುದಾಯಗಳ ಪಾತ್ರ ನಿರ್ಣಾಯಕವಾಗಿದ್ದು, ಮಡಿವಾಳ ಸಮಾಜ ಸೇರಿದಂತೆ ಸವಿತಾ ಸಮಾಜ, ತಿಗಳರು, ಈಡಿಗ ಹಾಗೂ ವಿಶ್ವಕರ್ಮ ಸಮಾಜ,ಉಪ್ಪಾರ ಹೀಗೆ ವಿವಿಧ ಕಾಯಕ ಸಮಾಜಗಳು ಹೆಚ್ಚಿನ ಪ್ರಮಾಣದಲ್ಲಿ ಬಿಜೆಪಿ ಬೆಂಬಲಕ್ಕೆ ನಿಂತಿದ್ದು ಇಡೀ ಕ್ಷೇತ್ರದಲ್ಲಿ ಬಿಜೆಪಿ ಪರ ಅಲೆ ಎದ್ದು ಕಾಣುತ್ತಿದೆ. ಇದಕ್ಕೆ ಕಾರಣ ಶ್ರೀ ವಿಜಯೇಂದ್ರ ಯಡಿಯೂರಪ್ಪನವರು ಇಡೀ ಕಾಯಕ ಸಮುದಾಯಗಳು ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದ್ದು ಆಭಿವೃದ್ಧಿಯಲ್ಲಿ ಹಿಂದುಳಿದಿರುವ ಶಿರಾ ಕ್ಷೇತ್ರ ಇನ್ನು ಮುಂದೆ ಅಭಿವೃದ್ಧಿಯ ನಂದನವನವಾಗಲಿದೆ ಎಂದು ರಘು ಹೇಳಿದರು.

ಬಡವರುಮ ಕೃಷಿಕಾರ್ಮಿಕರು, ನಿರುಧ್ಯೋಗಿಗಳು ಬದುಕನ್ನು ಅರಸಿ ಊರುಗಳಿಗೆ ವಲಸೆ ಹೋಗಬೇಕಾದ ಪರಿಸ್ಥಿತಿ ಇದ್ದು ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದರೆ ಉಧ್ಯೋಗವಕಾಶಗಳನ್ನು ಸೃಷ್ಠಿಸಲು ಕೈಗಾರಿಕೆಗಳ ಸ್ಥಾಪನೆ ಹಾಗೂ ಸ್ವಾವಲಂಬನೆಯ ಉಧ್ಯೋಗದ ಅವಕಾಶಕ್ಕೆ ವಿಶೇಷ ಯೋಜನೆ ರೂಪಿಸುವುದು ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರ್ಕಾರದ ಗುರುಯಾಗಿದೆ ಎಂದು ರಘು ಕೌಟಿಲ್ಯ ಮತದಾರರಿಗೆ ಅರಿವು ಮೂಡಿಸಿದರು.
ಕರೇಕ್ಯಾತನಹಳ್ಳಿ, ಬರಗೂರು, ನಾದೂರು, ಹಂದಿಕುಂಟೆ, ಕಲ್ಲಳ್ಳಿ, ಬಡಮಾರನಹಳ್ಳಿ, ಗೋಣಿಹಳ್ಳಿ, ಮೊದಲಾದೆಡಿಗಳಲ್ಲಿ ನೆಡೆದ ಪ್ರಚಾರದ ವೇಳೆ ರಘು ಅವರೊಂದಿಗೆ ಮುಖಂಡರಾದ ಬರಗೂರು ನಟರಾಜು, ಯುವನಾಯಕರಾದ ಮನು, ಸುರೇಶ್, ಕೃಷ್ಣ, ರಾಮು ಮೊದಲಾದವರು ಹಾಜರಿದ್ದರು.