ಬಿಎಸ್ ವೈ ಅಧಿಕಾರದಿಂದ ಕೆಳಗಿಳಿಯಲು ಅವರ ಮಗನೇ ಕಾರಣ- ಎಂಎಲ್ ಸಿ ಹೆಚ್.ವಿಶ್ವನಾಥ್.

Promotion

ಮೈಸೂರು,ಅಕ್ಟೋಬರ್,7,2021(www.justkannada.in): ಮಗ ಮಾಡಿದ ಭ್ರಷ್ಟಾಚಾರದ ಕಾರಣಕ್ಕೆ  ಬಿಎಸ್ ಯಡಿಯೂರಪ್ಪ ಅಧಿಕಾರದಿಂದ ಕೆಳಗೆ ಇಳಿದರು ಎಂದು ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಹೇಳಿದರು.

ಮಾಜಿ ಸಿಎಂ ಬಿಎಸ್ ವೈ ಆಪ್ತ ಉಮೇಶ್ ಮನೆ ಮೇಲೆ ಐಟಿ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಎಂಎಲ್ ಸಿ ಹೆಚ್.ವಿಶ್ವನಾಥ್,  ನಾನು ಹಿಂದೆ ಮಾಡಿದ ಆರೋಪಗಳು ಈ ದಾಳಿ ಮೂಲಕ ಸತ್ಯವಾಗಿದೆ. ವಿಜಯೇಂದ್ರ ಮಾಡಿದ ಮಹಾ ಭ್ರಷ್ಟಾಚಾರಕ್ಕೆ ಈ ದಾಳಿ ಇನ್ನೊಂದು ಸಾಕ್ಷಿ. ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗೆ ಇಳಿದಿದ್ದು ವಯಸ್ಸಿನ ಕಾರಣಕ್ಕೆ ಅಲ್ಲ. ಅವರ ಮಗನ ಭ್ರಷ್ಟಾಚಾರದಿಂದಾಗಿ ಕೆಳಗಿಳಿದರು ಎಂದರು.

ಈ ದಾಳಿ ಪರೋಕ್ಷವಾಗಿ ವಿಜಯೇಂದ್ರ ಮೇಲೆ ಆದ ದಾಳಿಯಾಗಿದೆ. ತಂದೆಯ ಪೆನ್, ನಾಲಗೆ ಎಲ್ಲವನ್ನೂ ಕಿತ್ತುಕೊಂಡು ತಂದೆಯ ಮರ್ಯಾದೆಯನ್ನು ಕಳೆದು ಪಕ್ಷದ ಮರ್ಯಾದೆಯನ್ನೂ ಕಳೆದರು ಎಂದು ಹೆಚ್.ವಿಶ್ವನಾಥ್ ಹೇಳಿದರು.

ಇಂದು ಬೆಳಗ್ಗೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರ ಆಪ್ತಸಹಾಯಕ ಉಮೇಶ್ ಸೇರಿ 50ಕ್ಕೂ ಹೆಚ್ಚುಕಡೆಗಳಲ್ಲಿ ಇಂದು ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು.

Key words: BS Yeddyurappa- step down –power- his son- MLC -H Vishwanath.