ಅಪವಾದ ಲೆಕ್ಕಿಸದೇ ಚಾಮರಾಜನಗರಕ್ಕೆ ಸಿಎಂ ಬೊಮ್ಮಾಯಿ: ಐಟಿ ದಾಳಿ ಬಗ್ಗೆ ಪ್ರತಿಕ್ರಿಯಿಸಿದ್ದು ಹೀಗೆ…?

ಮೈಸೂರು,ಅಕ್ಟೋಬರ್,7,2021(www.justkannada.in): ಚಾಮರಾಜನಗರಕ್ಕೆ ಭೇಟಿ‌ಕೊಟ್ಟರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಅಪವಾದ ಹಿನ್ನೆಲೆ, ಈ ಅಪವಾದವನ್ನೂ ಲೆಕ್ಕಿಸದೆ ಸಿಎಂ ಬಸವರಾಜ ಬೊಮ್ಮಾಯಿ ಇಂದು ಚಾಮರಾಜನಗರಕ್ಕೆ ಭೇಟಿ ನೀಡಿದ್ದಾರೆ.

ಚಾಮರಾಜನಗರದಲ್ಲಿ ರಾಷ್ಟ್ರಪತಿಗಳ ಜೊತೆ ಆಸ್ಪತ್ರೆ ಉದ್ಘಾಟನೆ ಕಾರ್ಯಕ್ರಮವಿದ್ದು ಈ ಹಿನ್ನೆಲೆಯಲ್ಲಿ ಮೈಸೂರಿನಿಂದ ಚಾಮರಾಜನಗರಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ತೆರಳಿದರು.

ರಾಜ್ಯದಲ್ಲಿ ನಡೆದಿರುವ ಐಟಿ ದಾಳಿ ಕುರಿತು ಚಾಮರಾಜನಗರಕ್ಕೆ ತೆರಳುವ ಮುನ್ನ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಬೆಳಿಗ್ಗೆ ಹಲವಾರು ಜನರ ನಿವಾಸದ ಮೇಲೆ ಐಟಿ ದಾಳಿ ಮಾಡಿದ್ದಾರೆ. ಇನ್ನೂ ಕೂಡ ದಾಳಿ ಮುಂದುವರಿದ ಕಾರಣ ಮಾಹಿತಿ ಸಿಕ್ಕಿಲ್ಲ. ಡಿಪಾರ್ಟ್‌ಮೆಂಟ್ ನವರು ಕೂಡ ಇನ್ನೂ ಹೇಳಿಲ್ಲ.ಐಟಿ ದಾಳಿಯ ಪ್ರಕರಣ ನಮ್ಮ ಸರ್ಕಾರಕ್ಕೆ ಸಂಬಂಧಿಸಿಲ್ಲ ಸಂಪೂರ್ಣ ಮಾಹಿತಿ ಪಡೆದು ಪ್ರತಿಕ್ರಿಯೆ ನೀಡುತ್ತೇನೆ. ಅದೇನು ವಿಚಾರ ಇದೆ ಅಂತ ತಿಳಿಯದೆ ಏನು ಹೇಳಲಿ ಎಂದರು.

ಬೆಳಗಾವಿ ಮನೆ ಕುಸಿತ ಪ್ರಕರಣ ಕುರಿತು ಮಾತನಾಡಿದ ಸಿಎಂ ಬೊಮ್ಮಾಯಿ, ಮೃತ ಕುಟುಂಬಗಳ ಜೊತೆ ಮಾತನಾಡಿದ್ದೇನೆ. ಐದು ಲಕ್ಷ ಪರಿಹಾರ‌ವನ್ನ ಘೋಷಿಸಿದ್ದೇನೆ ಎಂದರು.

Key words: CM basavaraj Bommai –Chamarajanagar- visit-IT attack.