ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಬಿಎಸ್ ವೈ ಅವರ ವಿರೋಧವಿಲ್ಲ –ಬಿವೈ ವಿಜಯೇಂದ್ರ.

Promotion

ಮೈಸೂರು,ಸೆಪ್ಟಂಬರ್,21,2022(www.justkannada.in): ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ವಿಚಾರಕ್ಕೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ವಿರೋಧಿಸಿಲ್ಲ  ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಸ್ಪಷ್ಟನೆ ನೀಡಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ ಬಿವೈ ವಿಜಯೇಂದ್ರ,  ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ವಿಚಾರದಲ್ಲಿ ಬಿ.ಎಸ್ ಯಡಿಯೂರಪ್ಪ ಮತ್ತು ನನ್ನ ಹೆಸರನ್ನ ಎಳೆದು ತರುತ್ತಿದ್ದಾರೆ ಪಂಚಮಸಾಲಿ ಸಮಾಜದ ವಿರೋಧಿ ಎಂದು ಬಿಂಬಿಸುವ ಯತ್ನ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಯಾರೋ ರಾಜಕೀಯ ಕಾರಣಕ್ಕೆ ಶ್ರೀಗಳ ಮನಸು ಕೆಡಿಸಿದ್ದಾರೆ. ಸ್ವಾಮೀಜಿಗಳಿಗೆ ಇಲ್ಲಸಲ್ಲದನ್ನ ಹೇಳಿ ದಾರಿತಪ್ಪಿಸುತ್ತಿದ್ದಾರೆ ಎಂದು ಬಿವೈ ವಿಜಯೇಂದ್ರ ಅಸಮಾಧಾನ ವ್ಯಕ್ತಪಡಿಸಿದರು.

Key words: BS Yeddyurappa-  no objection – 2A -reservation – Panchmasali community-BY Vijayendra.