Sunday, August 23, 2026

BDA Apartments

Home Front Page ಕಾಂಗ್ರೆಸ್ ನಿಂದ ‘PAY CM’ ಅಭಿಯಾನ:  ರೀಡೋ ಸಿದ್ಧರಾಮಯ್ಯ , ಇಡಿ ಡಿಕೆಶಿ ಎಂದು ಬಿಜೆಪಿ...

ಕಾಂಗ್ರೆಸ್ ನಿಂದ ‘PAY CM’ ಅಭಿಯಾನ:  ರೀಡೋ ಸಿದ್ಧರಾಮಯ್ಯ , ಇಡಿ ಡಿಕೆಶಿ ಎಂದು ಬಿಜೆಪಿ ತಿರುಗೇಟು

ಬೆಂಗಳೂರು,ಸೆಪ್ಟಂಬರ್,21,2022(www.justkannada.in):  ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಇದೀಗ QR ಕೋಡ್ ವಾರ್ ಶುರುವಾಗಿದೆ. ಕಾಂಗ್ರೆಸ್ ನಿಂದ PAY CM ಹೆಸರಿನಲ್ಲಿ ಅಭಿಯಾನ ಆರಂಭವಾದರೇ ಇದಕ್ಕೆ ಬಿಜೆಪಿ ತಕ್ಕ ತಿರುಗೇಟು ನೀಡಿದೆ.

‘PAY CM ಎಂಬ QR ಕೋಡ್ ಹೊಂದಿರುವ ಪೋಸ್ಟರ್ ಬಿಡುಗಡೆ ಮಾಡಲಾಗಿದ್ದು ಇದಕ್ಕೆ ತಿರುಗೇಟು ನೀಡಿರು ಬಿಜೆಪಿ ರೀಡೋ ಸಿದ್ಧರಾಮಯ್ಯ  ಇಡಿ ಡಿಕೆ ಶಿವಕುಮಾರ್ ಎಂಬ ಪೋಸ್ಟರ್  ರಿಲೀಸ್ ಮಾಡಿ ತಿರುಗೇಟು ನೀಡಿದೆ.

ಕಾಂಗ್ರೆಸ್  ಅಭಿಯಾನ ಕುರಿತು ಪ್ರತಿಕ್ರಿಯಿಸಿ ಕಿಡಿಕಾರಿದ ಸಚಿವ ಬಿಸಿ ಪಾಟೀಲ್,  ಸಿದ್ದರಾಮಯ್ಯ ಕಾಂಗ್ರೆಸ್ ಏನು ಸತ್ಯ ಹರಿಶ್ಚಂದ್ರನ  ಮಕ್ಕಳ.  ಪೇ ಸಿಎಂ ಕ್ಯಾಂಪೇನ್ ಮಾಡ್ತೀರೋದು ನಾಚಿಕೆಗೇಡಿನ ಸಂಗತಿ ಎಂದು ವಾಗ್ದಾಳಿ ನಡೆಸಿದ್ದಾರೆ.

Key words: ‘PAY CM-campaign – Congress-Reedo Siddaramaiah- ED –DK shivakumar- BJP