ಐಪಿಎಲ್ ನಲ್ಲಿ ಯಾರು ಮಾಡದ ದಾಖಲೆ ಬರೆದ ಬೌಲರ್ ಅಮಿತ್ ಮಿಶ್ರಾ

ಬೆಂಗಳೂರು, ಏಪ್ರಿಲ್ 22, 2021 (www.justkannada.in): 

ಅಮಿತ್ ಮಿಶ್ರಾ ಐಪಿಎಲ್​​ನಲ್ಲಿ 5 ಬಾರಿ ನಾಲ್ಕು ವಿಕೆಟ್​ ಪಡೆದ ಸಾಧನೆ ಮಾಡಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್​ ಮತ್ತು ಮುಂಬೈ ಇಂಡಿಯನ್ಸ್​ ನಡುವಿನ ಪಂದ್ಯದಲ್ಲಿ ಡೆಲ್ಲಿ ತಂಡ 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. ಈ ಗೆಲುವಿಗೆ ಮೂಲ ಕಾರಣ ಅನುಭವಿ ಲೆಗ್​ ಸ್ಪೀನ್ನರ್​ ಅಮಿತ್​ ಮಿಶ್ರಾ.

ಈ ಮೂಲಕ ಐಪಿಎಲ್​​ನಲ್ಲಿ 5 ಬಾರಿ ನಾಲ್ಕು ವಿಕೆಟ್​ ಪಡೆದ ಸಾಧನೆ ಮಾಡಿದ್ದಾರೆ ಅಮಿತ್.

ಇದಕ್ಕೂ ಮುನ್ನ ವೆಸ್ಟ್​ ಇಂಡೀಸ್​ನ ಬೌಲರ್​ ಸುನೀಲ್​ ನರೈನ್ ಪ್ರಸ್ತುತ ಐಪಿಎಲ್​​ನಲ್ಲಿ ಕೆಕೆಆರ್​ ತಂಡದ ಪರ ಆಡುತ್ತಿದ್ದರು. ಇವರು ಐಪಿಎಲ್​​ನಲ್ಲಿ ಒಟ್ಟು 7 ಬಾರಿ 4 ವಿಕೆಟ್​ ಪಡೆದ ಸಾಧನೆ ಮಾಡಿದ್ದಾರೆ.